ದಿವಂಗತ ಸುದೀಶ್ ಕುಮಾರ್ ಶೆಟ್ಟಿ ಹಾಗೂ ಶ್ರೀಮತಿ ಅಕ್ಷತಾ ಎಸ್ ಶೆಟ್ಟಿ ಅವರ ಸುಪುತ್ರ ಮಂಗಳೂರು ಕೊಡಿಯಾಲ್ಬೈಲ್ ಎಕ್ಸ್ಪರ್ಟ್ ಪಿಯು ಕಾಲೇಜಿನ ಅತ್ಯುನ್ನತ ಸಾಧಕ ವಿದ್ಯಾರ್ಥಿಯಾದ ಸಮನ್ಯು ಎಸ್ ಶೆಟ್ಟಿ ಅವರು ಪುಣೆಯ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನ (AFMC) 2026ರ ಸಾಲಿನ ಎಮ್-3 ಬ್ಯಾಚ್ನ ಎಂ.ಬಿ.ಬಿ.ಎಸ್ (MBBS) ಕೋರ್ಸ್ಗೆ ಆಯ್ಕೆಯಾಗಿದ್ದಾರೆ. ಇವರು ಎನ್ಡಿಎ (NDA) ಲಿಖಿತ ಪರೀಕ್ಷೆಯಲ್ಲೂ ಯಶಸ್ವಿಯಾಗಿ ತೇರ್ಗಡೆಯಾಗಿದ್ದು, ಮೈಸೂರಿನ ನಂ. 2 ಎಎಫ್ಎಸ್ಬಿಯಲ್ಲಿ (2 AFSB) ನಡೆದ ಐದು ದಿನಗಳ ಎಸ್ಎಸ್ಬಿ (SSB) ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ತಮ್ಮ ಅಪಾರ ಸಾಧನೆಗಳ ಸಾಲಿಗೆ ಮತ್ತೊಂದು ಗರಿ ಎಂಬಂತೆ ಸಮನ್ಯು ಅವರು ದ್ವಿತೀಯ ಪಿಯುಸಿ ಮಂಡಳಿ ಪರೀಕ್ಷೆಯಲ್ಲಿ 600ಕ್ಕೆ 598 ಅಂಕಗಳನ್ನು ಪಡೆಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಇವರು ಹಲವು ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಭಾಗವಹಿಸಿ ಅತ್ಯುತ್ತಮ ಶ್ರೇಣಿಗಳನ್ನು ಪಡೆದುಕೊಂಡಿದ್ದಾರೆ.
ಮಾಹಿತಿ : ಕೆ ಎನ್ ಶರತ್ ಭಂಡಾರಿ















































































































