ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಶಂಕರ್ ಎಲೆಕ್ಟ್ರಿಕಲ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಎಂಡಿ ರಾಜೇಶ್ ಶೆಟ್ಟಿ, ಶ್ರೀಮತಿ ಅಪರ್ಣಾ ರಾಜೇಶ್ ಶೆಟ್ಟಿ ಹಾಗೂ ಕುಟುಂಬದವರು ಆಗಸ್ಟ್ 28 ರಂದು ರಾಜೇಶ್ ಶೆಟ್ಟಿಯವರ 51 ನೇ ಹುಟ್ಟುಹಬ್ಬ ಹಾಗೂ ವರಮಹಾಲಕ್ಷ್ಮಿ ಹಬ್ಬದ ಪುಣ್ಯ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯಿಂದ ನವೀನವಾಗಿ ವಿನ್ಯಾಸಗೊಳಿಸಲಾದ ವಿಶೇಷ ಪ್ರಭಾವಳಿಯನ್ನು ಸಮರ್ಪಿಸಿದರು. ಈ ಸಂಧರ್ಭದಲ್ಲಿ ರಾಜೇಶ್ ಶೆಟ್ಟಿ ಕುಟುಂಬಸ್ಥರು ಹಾಗೂ ದೇವಳದ ಅರ್ಚಕರಾದ ಅಸ್ರಣ್ಣ ಸಹೋದರರು ಉಪಸ್ಥಿತರಿದ್ದರು.



















































































































