ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೋಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳು ರೋಟರಿ ಇಂಟರ್ರ್ನ್ಯಾಷನಲ್ ಡಿಸ್ಟ್ರಿಕ್ಟ್ 3182 ಇವರು ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲದಲ್ಲಿ ಆಯೋಜಿಸಿದ ರೋಟರಿ ಯೂತ್ ಲೀಡರ್ ಶಿಪ್ ಅವಾರ್ಡ್ RYLA -2026 ರಲ್ಲಿ ಅಧ್ಯಯನ ಭೇಟಿಯ ಭಾಗವಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ರೋಟರಿ ಕ್ಲಬ್ ನ ಸಮಾಜ ಸೇವೆಯ ವಿವಿಧ ಮಜಲುಗಳ ಬಗ್ಗೆ ಮಾಹಿತಿ ಪಡೆದು, ಸಂಪನ್ಮೂಲ ವ್ಯಕ್ತಿಗಳ ಜೊತೆ ಸಂವಾದ ನಡೆಸಿದರು. ಈ ಸಂದರ್ಭ ವಿದ್ಯಾರ್ಥಿಗಳ ಜೊತೆ ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಸತೀಶ್ ಹೆಗ್ಡೆ, ಕಾರ್ಯದರ್ಶಿ ಅಶೋಕ್ ವಿ ಶೆಟ್ಟಿ ಕೊಡ್ಲಾಡಿ, RYLA ವಲಯ ಸಂಯೋಜಕ ರೋ. ವೆಂಕಟೇಶ್ ನಾವುಂದ ಹಾಗೂ ಕಾಲೇಜಿನ ರೋಟರಿ ಕ್ಲಬ್ ಸಂಯೋಜಕರಾದ ಶ್ರೀಮತಿ ವಿನಯಾ ವಿ ಶೆಟ್ಟಿ ಹಾಗೂ ವಿದ್ಯಾಥಿಗಳು ಉಪಸ್ಥಿತರಿದ್ದರು.


















































































































