ಕರಾವಳಿ ಶೈಲಿಯ ಸಾಂಪ್ರದಾಯಿಕ ಅಡುಗೆ, ವೈವಿಧ್ಯಮಯ ಖಾದ್ಯಗಳು ಹಾಗೂ ಮನೆಯ ಅಡುಗೆಯ ರುಚಿಯನ್ನು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ತಯಾರಿಸಿ, ಯೂಟ್ಯೂಬ್ ಮೂಲಕ ಎಲ್ಲರಿಗೂ ಪರಿಚಯಿಸುತ್ತಿರುವ ಪ್ರಶಾಂತ್ ಶೆಟ್ಟಿ ತೋಡಾರು ಇಂದು ಅನೇಕ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಆಹಾರಪ್ರಿಯರಲ್ಲಿ ಒಬ್ಬರು. ಮನೆಯಲ್ಲಿಯೇ ಸಾಂಪ್ರದಾಯಿಕ ರೀತಿಯಲ್ಲಿ ಅಡುಗೆ ತಯಾರಿಸಿ, ಅದರ ತಯಾರಿಕಾ ವಿಧಾನವನ್ನು ಸರಳವಾಗಿ ವಿವರಿಸುವ ಮೂಲಕ ಕರಾವಳಿಯ ಆಹಾರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ವಿಶೇಷವಾಗಿ ಇಂದಿನ ಯುವ ಪೀಳಿಗೆಗೆ ಅಡುಗೆ ಕಲಿಯಲು ಹಾಗೂ ನಮ್ಮ ಕರಾವಳಿಯ ಸಾಂಪ್ರದಾಯಿಕ ಖಾದ್ಯಗಳನ್ನು ಉಳಿಸಿ ಬೆಳೆಸಲು ಇವರ ಯೂಟ್ಯೂಬ್ ಚಾನೆಲ್ ಉತ್ತಮ ವೇದಿಕೆಯಾಗಿದೆ.
ಪ್ರಶಾಂತ್ ಶೆಟ್ಟಿ ಅವರ ಈ ಅಡುಗೆ ಪ್ರಯಾಣಕ್ಕೆ ಅವರ ಪತ್ನಿ, ತಾಯಿ ಹಾಗೂ ಅತ್ತೆ ಕೂಡಾ ಉತ್ತಮ ಸಹಕಾರ ನೀಡುತ್ತಿದ್ದಾರೆ. ಕುಟುಂಬದ ಸದಸ್ಯರ ಸಹಕಾರದೊಂದಿಗೆ ಮನೆಯ ಅಡುಗೆಯನ್ನು ಜನರ ಮನೆಮನೆಗೆ ತಲುಪಿಸುತ್ತಿರುವುದು ಇವರ ವಿಶೇಷತೆ. ಅಡುಗೆಯ ಜೊತೆಗೆ ಪ್ರಶಾಂತ್ ಶೆಟ್ಟಿ ಅವರು ಮೂಡುಬಿದ್ರೆಯ MITE ಕಾಲೇಜಿನಲ್ಲಿ ಲ್ಯಾಬ್ ಕೋ ಆರ್ಡಿನೇಟರ್ ಆಗಿ ವೃತ್ತಿ ಜೀವನವನ್ನು ನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿರುವ ಅವರು, ಪ್ರವೃತ್ತಿಯಲ್ಲಿ ಒಬ್ಬ ಅಪ್ಪಟ ಕಲಾವಿದ ಹಾಗೂ ಅಡುಗೆ ಮಾಡುವುದರಲ್ಲಿ ನಿಪುಣರು. ತಮ್ಮ ಪ್ರತಿಭೆ, ಆಸಕ್ತಿ ಮತ್ತು ಪರಿಶ್ರಮವನ್ನು ಬಳಸಿಕೊಂಡು ಕರಾವಳಿಯ ಅಡುಗೆ ಪರಂಪರೆಯನ್ನು ಯೂಟ್ಯೂಬ್ ಮೂಲಕ ಜಗತ್ತಿಗೆ ಪರಿಚಯಿಸುತ್ತಿರುವ ಪ್ರಶಾಂತ್ ಶೆಟ್ಟಿ ತೋಡಾರ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ರುಚಿಯ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಒಂದು ಸುಂದರ ಪ್ರಯತ್ನ ಇವರದ್ದಾಗಿದೆ.

























































































































