ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ರೋ. ಸಿಎ ಜಗನ್ನಾಥ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ರೋ. ಎಂ.ವಿ ರವಿ ಆಯ್ಕೆಗೊಂಡಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಚಿತ್ರದುರ್ಗದ ವೈ.ಆರ್ ಆದಿಶೇಷ ರೋಟರಿ ಭವನದಲ್ಲಿ ಜುಲೈ 19 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ರೋ. PHF. IPDG ಎಂ.ಕೆ ರವೀಂದ್ರ ಹಾಗೂ ರೋ. PHF. PDG ಕೆ ಮಧು ಪ್ರಸಾದ್ ಆಗಮಿಸಲಿದ್ದಾರೆ. ಮಾಜಿ ಜಿಲ್ಲಾ ಗವರ್ನರ್ ರೋ. PHF ಅಭಿನಂದನ್ ಎ ಶೆಟ್ಟಿಯವರು ಪದಗ್ರಹಣ ಕಾರ್ಯಕ್ರಮ ನೆರವೇರಿಸಲಿದ್ದು, ರೋ. PHF ಎಲ್ ಸವಿತಾ ಶಿವಕುಮಾರ್ ಅವರು ಕ್ಲಬ್ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ.















































































































