
ಎಲ್ಲರ ಪ್ರೀತಿಗೆ ಪಾತ್ರರಾಗಿ ಸಮಾಜದ ಸಂಘಟನೆಗೆ ಎಲ್ಲರೂ ಒಗ್ಗಟ್ಟಾಗಿ ಹೋಗುವ ನಾಯಕತ್ವವಿರುವ ಇಲ್ಲಿನ ಬಂಟರ ಸಂಘವು ಎಲ್ಲಾ ಬಂಟರ ಸಂಘಕ್ಕೆ ಮಾದರಿ ಎಂದು ಬೆಂಗಳೂರಿನ ಎಂ.ಆರ್.ಜಿ ಗ್ರೂಪ್ ನ ಸಿಎಂಡಿ ಡಾ| ಕೆ. ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಬಜಪೆಯ ತಾರಿಕಂಬಳದ ಮುಂಡಾರಿನಲ್ಲಿ ಬಂಟರ ಸಂಘ ಬಜಪೆ ವಲಯದ 10 ಕೋಟಿ ರೂಪಾಯಿ ವೆಚ್ಚದ ನೂತನ ಬಂಟರ ಭವನದ ಶಿಲಾನ್ಯಾಸ ಮತ್ತು ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.


ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿ.ಕೆ ಗ್ರೂಪ್ ಆಫ್ ಕಂಪನೀಸ್ ನ ಸಿಎಂಡಿ ಕರುಣಾಕರ ಶೆಟ್ಟಿ ಮಧ್ಯಗುತ್ತು ಅವರು ಕಟ್ಟಡದ ನೀಲನಕ್ಷೆ ಅನಾವರಣಗೊಳಿಸಿದರು. ಪುಣೆ ಬಂಟರ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ ಕೆಂಜಾರು ಗುತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಗೈದರು. ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನ ಛೇರ್ಮನ್ ಉಪೇಂದ್ರ ಶೆಟ್ಟಿ ವಿದ್ಯಾರ್ಥಿ ಸಹಾಯ ಧನ ವಿತರಣೆ ಮಾಡಿದರು. ವಿಜ್ಞಾಪನಾ ಪತ್ರವನ್ನು ಬೆಂಗಳೂರಿನ ಶಂಕರ್ ಎಲೆಕ್ಟ್ರಿಕಲ್ಸ್ ನ ಸಿಎಂಡಿ ರಾಜೇಶ್ ಶೆಟ್ಟಿ ಬಿಡುಗಡೆಗೊಳಿಸಿ ನೂತನ ಬಂಟರ ಭವನದ ದೀಪಾಲಂಕಾರ ವ್ಯವಸ್ಥೆಗೆ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.


ಉದ್ಯಮಿ ಹೇರಂಭ ಇಂಡಸ್ಟ್ರೀಸ್ನ ಸಿಎಂಡಿ ಡಾ| ಕನ್ಯಾನ ಸದಾಶಿವ ಶೆಟ್ಟಿ ಮತ್ತು ಶಶಿ ಕೇಟರಿಂಗ್ ಪ್ರೈವೇಟ್ ಲಿಮಿಟೆಡ್ ನ ಸಿಎಂಡಿ ಶಶಿಧರ ಶೆಟ್ಟಿ ಬರೋಡ ಅವರನ್ನು ಸನ್ಮಾನಿಸಲಾಯಿತು. ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ ಪೂಜಾರಿ, ಉಪಾಧ್ಯಕ್ಷೆ ಶರ್ಮಿಳಾ ಶೆಟ್ಟಿ ಸಹಾಯಧನ ವಿತರಣೆ ಮಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಕರಂಬಾರು ಪಡುಮನೆ (ಕೆಂಜಾರು ಪೇರ್ಲ) ಮಾತನಾಡಿ, ಬಡವರ ಶ್ರೇಯೋಭಿವೃದ್ಧಿಗೆ, ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಬಂಟರ ಭವನ ನಿರ್ಮಾಣವಾಗಲಿದೆ. ಎಲ್ಲಾ ದಾನಿಗಳ ವಿಶ್ವಾಸಕ್ಕೆ ಪೂರಕವಾಗಿ ಪಾರದರ್ಶಕವಾಗಿ ಕಾರ್ಯ ಮಾಡುತ್ತೇನೆ ಎಂದರು.


ಶಬರಿ ಕ್ಯಾಟರಿಂಗ್ ನ ಆಡಳಿತ ನಿರ್ದೇಶಕ ಕೆ.ಕೆ ಶೆಟ್ಟಿ, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ವೈ ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ನಿಕಟಪೂರ್ವ ಅಧ್ಯಕ್ಷ ಬಾಬು ಶೆಟ್ಟಿ ಪೆರಾರ, ಮಹಿಳಾ ವಿಭಾಗದ ಗೌರವಾಧ್ಯಕ್ಷೆ ಮಲ್ಲಿಕಾ ವರಪ್ರಸಾದ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೀತಿ ಹರೀಶ್ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ಡಾ. ಪ್ರಸಾದ್ ರೈ ಬಾಯಾರ್ ಗುತ್ತು, ಕುಸುಮಾಕರ ಆರ್. ಶೆಟ್ಟಿ ಮುತ್ತೂರು ಮಿತ್ತೊಟ್ಟು, ಪ್ರಧಾನ ಕಾರ್ಯದರ್ಶಿ ಪುನೀತ್ ಮಾಡ ಕಮ್ಮಾಜೆ, ಕೋಶಾಧಿಕಾರಿ ಸುರೇಶ್ ಶೆಟ್ಟಿ ಅರೆಕಲ್ಲು ಉಪಸ್ಥಿತರಿದ್ದರು. ಸಂಘದ ಜೊತೆ ಕಾರ್ಯದರ್ಶಿ ಮಹೇಶ್ ಶೆಟ್ಟಿ ಮೊಗರುಗುತ್ತು ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಮತ್ತು ನಿತೀಶ್ ಶೆಟ್ಟಿ ನಿರೂಪಿಸಿದರು. ಶಿಕ್ಷಕ ಜಯಕರ ಶೆಟ್ಟಿ ವಂದಿಸಿದರು.






































































































































