
ಮೇ 2026ರಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಾಣಿಜ್ಯ ವಿಭಾಗದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಸುಧೀಕ್ಷಾ ಎಸ್ ಶೆಟ್ಟಿ (290) ಉತ್ತೀರ್ಣರಾಗಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಸಿಎ ಫೌಂಡೇಶನ್ ನಿಂದ ಸಿಎ ಇಂಟರ್ಮೀಡಿಯೇಟ್ ಹಾಗೂ ಸಿಎ ಫೈನಲ್ವರೆಗೆ ನಿರಂತರ ಮತ್ತು ಸಮಗ್ರ ತರಬೇತಿ ವ್ಯವಸ್ಥೆ ರೂಪಿಸಲಾಗಿದೆ. ದೇಶದ ವಿವಿಧ ಭಾಗಗಳ ಅನುಭವಿ ಹಾಗೂ ಪರಿಣತ ಚಾರ್ಟರ್ಡ್ ಅಕೌಂಟೆಂಟ್ಗಳು ಮತ್ತು ವಿಷಯ ತಜ್ಞರಿಂದ ಗುಣಮಟ್ಟದ ಬೋಧನೆ, ನಿಯಮಿತ ಮೌಲ್ಯಮಾಪನ, ವೈಯಕ್ತಿಕ ಮಾರ್ಗದರ್ಶನ ಹಾಗೂ ಪರಿಕಲ್ಪನಾ ಆಧಾರಿತ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ. ಈ ಶೈಕ್ಷಣಿಕ ಮಾದರಿಯೇ ವಿದ್ಯಾರ್ಥಿಗಳ ನಿರಂತರ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಡಾ. ಎಂ ಮೋಹನ ಆಳ್ವ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ವಾಣಿಜ್ಯ ವಿಭಾಗದ ಡೀನ್ ಅಭಿನಂದಿಸಿದ್ದಾರೆ.



























































































































