

ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಅಸಮರ್ಪಕತೆ ಕುರಿತು ಮನವಿ ನೀಡಲಾಯಿತು. ನರೇಂದ್ರ ಮೋದಿಯವರ ಆಯುಷ್ಮಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು ಉಡುಪಿ ಜಿಲ್ಲೆಯ ಜನಸಾಮಾನ್ಯರು ಪರದಾಡುತ್ತಿದ್ದು, ಈ ಕುರಿತು ಉಡುಪಿ ಜಿಲ್ಲಾಧಿಕಾರಿಗಳಿಗೆ ಮಾನವಿ ನೀಡಿ ಸಮಸ್ಯೆಯನ್ನು 7 ದಿನಗಳ ಒಳಗೆ ಸರಿಪಡಿಸುವಂತೆ ಗಡುವು ನೀಡಲಾಯಿತು. ಇಲ್ಲವೇ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸುವದಾಗಿ ಎಚ್ಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅಭಿರಾಜ್ ಸುವರ್ಣ, ಪ್ರದೀಪ್ ಕುಂದರ್, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರುಗಳಾದ ಗುರುರಾಜ್ ಮಾಡ, ಗಜೇಂದ್ರ ಎಸ್ ಬೆಳಮನೆ, ಪ್ರಥ್ವಿರಾಜ್ ಮಣಿಪಾಲ, ಕಾರ್ಯದರ್ಶಿಗಳಾದ ರಾಕೇಶ್ ಅಮೀನ್ ಕಾರ್ಕಳ, ನಿತೇಶ್ ಶೆಟ್ಟಿ ಕಪ್ಪೆಟ್ಟು, ಯತೀಶ್ ಶೆಟ್ಟಿ, ಕಾರ್ಯಕಾರಿಣಿ ಸದಸ್ಯರಾದ ದರ್ಶಿತ್ ಶೆಟ್ಟಿ, ಗಣೇಶ್ ಕುಂದರ್, ನಿತೇಶ್, ಆದಿತ್ಯ ಆಚಾರ್ಯ ಗ್ರಾಮಾಂತರ ಅಧ್ಯಕ್ಷ ಸುಶಾಂತ್ ಪೂಜಾರಿ, ಉಪಾಧ್ಯಕ್ಷ ಆಯುಷ್ ಪೂಜಾರಿ ಉಪಸ್ಥಿತರಿದ್ದರು.






























































































































