

ಬಳ್ಳಮಂಜದಲ್ಲಿ ಕಳೆದ 27 ವರ್ಷಗಳಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿರುವ ಸದ್ಗುರು ಆಯಿಲ್ ಮಿಲ್ (ಶುದ್ಧ ಕೊಬ್ಬರಿ ಎಣ್ಣೆ) ಇದರ ನೂತನ ಕಟ್ಟಡದ ಉದ್ಘಾಟನೆಯನ್ನು ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರ್ಷ ಸಂಪಿಗೆತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.




ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಮಧು ಕೆ, ಡಾ. ಕೆ.ಎಂ ಶೆಟ್ಟಿ, ಅಶೋಕ್ ಗುಂಡಿಯಲ್ಕೆ, ಸುಧೀರ್ ಶೆಟ್ಟಿ ಕೋರಬೆಟ್ಟು, ಜಗನ್ನಾಥ ಪಕ್ಕಲ, ಕಿರಣ್ ನಾರಾಯಣ ಪೂಜಾರಿ, ಚಂದ್ರ ಸಂಪಿಗೆತ್ತಾಯ, ಯಕ್ಷನ್, ಸುಂದರ ಪೂಜಾರಿ, ಸಂಜೀವ ಮಾಯಿಲೋಡಿ, ಸದಾನಂದ ಪೂಜಾರಿ, ನಾಣ್ಯಪ್ಪ ಮೂಲ್ಯ, ಮಾಲಕರಾದ ಶಶಿಧರ ರೈ, ಶ್ರೀಮತಿ ಜಯಶ್ರೀ ಎಸ್ ರೈ, ಯತೀಶ್ ರೈ, ಶ್ರೀಮತಿ ಧನ್ಯ ಯತೀಶ್ ರೈ, ಮಾ. ಕಿಯಾಂಶ್ ಯತೀಶ್ ರೈ, ಇನ್ನಿತರರು ಉಪಸ್ಥಿತರಿದ್ದರು.




























































































































