
ಬಾಂಬೆ ಬಂಟ್ಸ್ ಅಸೋಸಿಯೇಶನ್ ಮುಂಬಯಿ ಮಹಾನಗರದಲ್ಲಿರುವ ಜಾತೀಯ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿ ಇರುವ ಒಂದು ಸಂಸ್ಧೆ. ಇದರ ಮಹಿಳಾ ವಿಭಾಗದ ವತಿಯಿಂದ ಇದೇ ಬರುವ ಜೂನ್ 21 ರಂದು ಆದಿತ್ಯವಾರ ಸಾಯಂಕಾಲ 4.00 ಗಂಟೆಗೆ ಸರಿಯಾಗಿ ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ ಶೆಟ್ಚಿಯವರ ಅಧ್ಯಕ್ಷತೆಯಲ್ಲಿ ಬಂಟ್ಸ್ ಸೆಂಟರ್ ಜೂಯಿನಗರ ನವಿ ಮುಂಬಯಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಿದೆ. ಈ ಕಾರ್ಯಕ್ರಮದಲ್ಲಿ ಯೋಗ ಗುರುಗಳಾದ ಶ್ರೀಮತಿ ಸ್ವಾತಿ ಶೆಟ್ಟಿ, ಶ್ರೀಮತಿ ಸವಿತಾ ರತ್ನಾಕರ ಶೆಟ್ಟಿ ಹಾಗೂ ಸಮಾಜಸೇವಕಿ ಶ್ರೀಮತಿ ರತಿ ಶೆಟ್ಟಿಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀಮತಿ ಸ್ವಾತಿ ಶೆಟ್ಟಿಯವರು ಯೋಗಾಭ್ಯಾಸದ ಬಗ್ಗೆ ವಿವಿಧ ಸಾಮಾನ್ಯ ಮತ್ತು ಕಠಿಣ ಆಸನಗಳನ್ನು ಪ್ರಾಯೋಗಿಕವಾಗಿ ಸ್ವಯಂ ಪ್ರದರ್ಶಿಸಲಿದ್ದಾರೆ ಮತ್ತು ಶ್ರೀಮತಿ ಸವಿತಾ ಆರ್ ಶೆಟ್ಟಿಯವರು ಯೋಗಾಭ್ಯಾಸದ ಮಾಹಿತಿಯನ್ನು ವಿವರವಾಗಿ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಕೆ ಶೆಟ್ಟಿ, ಗೌ.ಪ್ರ ಕಾರ್ಯದರ್ಶಿ ನ್ಯಾ. ಶೇಖರ್ ಆರ್ ಶೆಟ್ಟಿ, ಗೌ. ಕೋಶಾಧಿಕಾರಿ ಸಿ.ಎ ವಿಶ್ವನಾಥ ಶೆಟ್ಟಿ, ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ವಿಶ್ವಸ್ಥರು ಮತ್ತು ಸಮಿತಿ ಸದಸ್ಯರೆಲ್ಲರೂ ಭಾಗವಹಿಸಲಿದ್ದಾರೆ. ಸಮಾಜ ಬಾಂಧವರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆಯಬೇಕು ಎಂದು ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಶಾಂತಾ ಎನ್ ಶೆಟ್ಟಿ, ಉಪಾಧ್ಯಕ್ಷೆ ಶ್ರೀಮತಿ ಸಹಾನಿ ಶೆಟ್ಟಿ, ಕಾರ್ಯದರ್ಶಿ ಶ್ರೀಮತಿ ಉಷಾ ಶೆಟ್ಟಿ, ಕೋಶಾಧಿಕಾರಿ ಶ್ರೀಮತಿ ನಾಗವೇಣಿ ಶೆಟ್ಟಿ ಹಾಗೂ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.






















































































































