
ರಾಜ್ಯದ ಮುಂಚೂಣಿಯ ಕ್ರೆಡಿಟ್ ಸಹಕಾರ ಸಂಘವಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಪಡೀಲ್ ಶಾಖೆಯನ್ನು ದ.ಕ ಜಿಲ್ಲಾಧಿಕಾರಿ ಕಾರ್ಯಾಲಯ ಪ್ರಜಾ ಸೌಧಕ್ಕೆ ಜೂನ್ 17 ರಂದು ಸ್ಥಳಾಂತರ ಮಾಡಲಾಯಿತು. ಉದ್ಘಾಟಕರಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ದರ್ಶನ್ ಎಚ್.ವಿರವರು ಮಾತನಾಡುತ್ತಾ, ನಮ್ಮ ಕಛೇರಿ ಸಂಕೀರ್ಣದಲ್ಲಿ ಬ್ಯಾಂಕುಗಳ ಹಾಗೆಯೇ ಜನಸಾಮಾನ್ಯರಿಗೆ ಆರ್ಥಿಕ ಸವಲತ್ತುಗಳನ್ನು ನೀಡಿ ಜನರ ಆರ್ಥಿಕ ಅಭ್ಯುದಯಕ್ಕೆ ಕೊಡುಗೆಯನ್ನು ನೀಡುತ್ತಿರುವ ಸಹಕಾರ ಸಂಘಗಳಿಗೆ ಅವಕಾಶ ಕಲ್ಪಿಸಲಾಗಿದೆ. ಶ್ರೀ ರಾಮಕೃಷ್ಣ ಸೊಸೈಟಿಯು ಹೆಚ್ಚು ಹೆಚ್ಚು ವಹಿವಾಟುಗಳನ್ನು ಮಾಡಿ ಇನ್ನಷ್ಟು ಅಭಿವೃದ್ಧಿಯನ್ನು ಕಾಣಲಿ ಎಂದು ಹಾರೈಸಿದರು.


ಸಭೆಯ ಮುಖ್ಯ ಅಭ್ಯಾಗತರಾದ ದಕ್ಷಿಣ ಕನ್ನಡ ಜಿಲ್ಲೆಯ ಅಪಾರ ಜಿಲ್ಲಾಧಿಕಾರಿ ರಾಜು ಕೆ. ರವರು ಮಾತನಾಡಿ, ರಾಜ್ಯದಲ್ಲಿ ಸಹಕಾರ ಚಳುವಳಿಯು ಗದಗದಲ್ಲಿ ಆರಂಭವಾಗಿದ್ದರೂ, ಅದು ಅತ್ಯುತ್ತಮವಾಗಿ ಪ್ರಗತಿಯನ್ನು ಹೊಂದಿ ಜನರ ವಿಶ್ವಾಸಕ್ಕೆ ಪಾತ್ರವಾಗಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ. ಇದಕ್ಕೆ ಪೂರಕವಾಗಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯು ಒಳ್ಳೆಯ ಕೆಲಸ ಮಾಡುತ್ತಿದ್ದು ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು. ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್ ರಮೇಶ್ ರವರು ಪಡೀಲ್ ಶಾಖೆಯು ಸ್ಥಾಪನೆಯ ಕಿರು ಅವಧಿಯಲ್ಲಿ ಒಳ್ಳೆಯ ಪ್ರಗತಿಯನ್ನು ಸಾಧಿಸಿದೆ. ಪ್ರತಿಷ್ಠಿತ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ವ್ಯವಹಾರವನ್ನು ಇನ್ನಷ್ಟು ವೃದ್ಧಿಪಡಿಸಲಿ ಎಂದು ಹಾರೈಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷರಾದ ಕೆ ಜೈರಾಜ್ ಬಿ ರೈಯವರು ಸಂಘದ ಕಾರ್ಯ ವೈಖರಿಯನ್ನು ವಿವರಿಸಿ ಸಂಘದ ಪಡೀಲ್ ಶಾಖೆಗೆ ಸ್ಥಳಾವಕಾಶವನ್ನು ಒದಗಿಸಿಕೊಟ್ಟು ಸಹಕರಿಸಿದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ತಿಳಿಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಜಯಪಾಲ ಶೆಟ್ಟಿಯವರ ಸಂದೇಶವನ್ನು ವಾಚಿಸಲಾಯಿತು. ಸಂಘದ ನಿರ್ದೇಶಕರಾದ ಕೆ ಸೀತಾರಾಮ ರೈ ಸವಣೂರುರವರು ಸಭೆಗೆ ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು. ಸಂಘದ ನಿರ್ದೇಶಕರುಗಳಾದ ಶಿವರಾಮ ಅಡ್ಯಂತಾಯ, ವಿಠಲ ಪಿ ಶೆಟ್ಟಿ, ಪಿ.ಬಿ ದಿವಾಕರ ರೈ, ಕುಂಬ್ರ ದಯಾಕರ ಆಳ್ವ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನ್ಯಾಕ್ ಹಾಗೂ ಡಾ. ಬಿ ಸಂಜೀವ ರೈಯವರು ಮತ್ತು ಮಹಾ ಪ್ರಬಂಧಕರಾದ ಗಣೇಶ್ ಜಿ.ಕೆ ರವರು ಉಪಸ್ಥಿತರಿದ್ದರು. ಪಡೀಲ್ ಶಾಖಾ ಉಸ್ತುವಾರಿ ನಿರ್ದೇಶಕರಾದ ಎಂ. ರಾಮಯ ಶೆಟ್ಟಿಯವರು ವಂದನಾರ್ಪಣೆ ನೀಡಿದರು. ಶಾಖಾಧಿಕಾರಿಯವರಾದ ಅಶ್ವಿನಿ ಎಸ್ ಶೆಟ್ಟಿ ಅವರು ಪ್ರಾರ್ಥಿಸಿದರು. ಕೇಂದ್ರ ಕಛೇರಿ ವ್ಯವಸ್ಥಾಪಕರಾದ ಶಮಂತ್ ಟಿ ರೈಯವರು ಕಾರ್ಯಕ್ರಮವನ್ನು ನಿರೂಪಿಸಿದರು.





























































































































