

ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಸಾಧನೆ ಮಾಡಿದ ಅಸಂಖ್ಯ ಸಾಧಕರು ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಪ್ರೇರಕರು. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಈ ಶಾಲೆಯಲ್ಲಿ ಹೆಚ್ಚಲು ಕಾರಣರಾದ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು ಅಭಿನಂದಾರ್ಹರು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅಭಿನಂದಿಸಿದರು. ಟ್ರೈನಿಂಗ್ ಶಾಲೆ ಎಂದು ಪ್ರಸಿದ್ದಿ ಪಡೆದ, ಶತಮಾನಗಳ ಇತಿಹಾಸ ಇರುವ ಬಲ್ಮಠ ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಜಿ.ಟಿ.ಟಿ.ಐ) ಮಂಗಳೂರು ಇಲ್ಲಿ ವಿವೇಕ ಯೋಜನೆ ಅಡಿಯಲ್ಲಿ ನಿರ್ಮಾಣವಾದ ನೂತನ ಶಾಲಾ ಕಟ್ಟಡದ ಉದ್ಘಾಟನೆ ಹಾಗೂ ಹಳೆ ವಿದ್ಯಾರ್ಥಿಗಳಿಂದ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಾಲ್ಕು ಕೊಠಡಿಗಳ ನೂತನ ಕಟ್ಟಡವನ್ನು ಗಿಡಕ್ಕೆ ನೀರೆರೆದು, ದೀಪ ಹಚ್ಚಿ ಶಾಸಕರು ಉದ್ಘಾಟನೆಯನ್ನು ನೆರವೇರಿಸಿದರು.



ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕದ್ರಿ ನವನೀತ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶೇಖಬ್ಬಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವನಿತಾ ದೇವಾಡಿಗ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಶರ್ಮಿಳಾ ಶೆಟ್ಟಿ, ಬಿ.ಐ.ಆರ್.ಟಿ ನಾಗರಾಜ್, CRP ಪ್ರಸಾದ್, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ಹಳೆ ವಿದ್ಯಾರ್ಥಿಗಳಾದ ವೆಂಕಟೇಶ್ ಎಮ್, ಸೂರ್ಯಕಾಂತ್ ಶೇಟ್, ನಿರ್ಮಲ ಎಸ್ ಶೆಟ್ಟಿ, ವಿದ್ಯಾ ರಾಕೇಶ್, ವಿದ್ಯಾ ರಘು ಶೆಟ್ಟಿ, ಲತಾ ಶೆಣೈ, ದೇವದತ್, ನರೇಂದ್ರ ಬಾಳಿಗ ಮೊದಲಾದವರು ಸಮವಸ್ತ್ರ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇತ್ತೀಚೆಗೆ ಅಗಲಿದ ಹಳೆ ವಿದ್ಯಾರ್ಥಿ ಟಿ. ನಾಗರಾಜ್ ರಾವ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಮುಖ್ಯೋಪಾಧ್ಯಾಯಿನಿ ಶಶಿಕಲಾ ಆರ್ ಸ್ವಾಗತಿಸಿದರು. ಶಿಕ್ಷಕರಾದ ಅನುಸೂಯ ವಂದಿಸಿದರು.





























































































































