

28 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿ, ಪ್ರಸ್ತುತ ಅಲೈಯನ್ಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಜನರಲ್ ಆಗಿ ಸಂಸ್ಥೆಯನ್ನು ಜಾಗತಿಕ ಮಾನ್ಯತೆಗೆ ಒಯ್ಯುತ್ತಿರುವ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಸುರೇಖಾ ಶೆಟ್ಟಿಯವರು ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ 2026-29 ರ ಸಾಲಿಗೆ ಜೊತೆ ಕಾರ್ಯದರ್ಶಿ ಹುದ್ದೆಗೆ ಡಾ| ದೀಪಕ್ ಶೆಟ್ಟಿ ಬಣದಲ್ಲಿ ಸ್ಪರ್ಧಿಸುತ್ತಿದ್ದಾರೆ.


ಕಾರ್ಪೊರೇಟ್ ಸಂಬಂಧಗಳು, ಪ್ರವೇಶ, ವಿದ್ಯಾರ್ಥಿ ಸೇವೆ, CSR, ಮಹಿಳಾ ಸಬಲೀಕರಣದಲ್ಲಿ 28 ವರ್ಷಗಳ ನಾಯಕತ್ವದ ಅನುಭವ, ವಿದ್ಯಾ ಸ್ಪಂದನ – ಕೌಶಲ್ಯ ಸ್ಪಂದನದ ಮೂಲಕ ಬಡ ಮಕ್ಕಳು ಮತ್ತು ಮಹಿಳೆಯರಿಗೆ ಉಚಿತ ಶಿಕ್ಷಣ, ಹೊಲಿಗೆ, ಇಂಗ್ಲಿಷ್ ಕಂಪ್ಯೂಟರ್ ತರಬೇತಿ ಮೂಲಕ ಸೇವೆ ಸಲ್ಲಿಸಿದ ಅನುಭವವಿರುವ ಇವರು ಬೆಂಗಳೂರು ಬಂಟರ ಸಂಘದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. CII, NHRD, RNS ವಿದ್ಯಾನಿಕೇತನದಲ್ಲಿಯೂ ಸಕ್ರಿಯ ಕೊಡುಗೆಯನ್ನು ನೀಡಿ, ಉದ್ಯಮ ಶಿಕ್ಷಣದ ನಡುವೆ ಸೇತುವೆಯಾಗಿ ಮಕ್ಕಳಿಗೆ ಉದ್ಯೋಗದ ಬಾಗಿಲು ತೆರೆದ ಸುರೇಖಾ ಶೆಟ್ಟಿಯವರು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಜಾಗತಿಕ ನಾಗರೀಕರನ್ನಾಗಿ ರೂಪಿಸುವುದು ಇವರ ಸಂಕಲ್ಪವಾಗಿದೆ.





























































































































