


ಮಂಗಳೂರಲ್ಲೊಂದು ಹೊಸ ಶುದ್ಧ ಸಸ್ಯಹಾರಿ ಊಟ, ತಿಂಡಿ, ತಿನಸುಗಳ ವಿನೂತನ ಪರಿಕಲ್ಪನೆಯ ಪಾರ್ಕ್ಸ್ ಸಮೂಹ ಸಂಸ್ಥೆಯ ‘ಕಾವೇಶ್ವರ ಕೆಫೆ’ ಕದ್ರಿ ಪಾರ್ಕ್ ಬಳಿ ಶುಭಾರಂಭಗೊಂಡಿತು. ಈ ಸಂಧರ್ಭ ಹೈಕೋರ್ಟ್ ವಕೀಲ ಅರುಣ್ ಶ್ಯಾಮ್, ಉದ್ಯಮಿ ರಘು ಎಲ್ ಶೆಟ್ಟಿ, ಸಮಾಜಸೇವಕ ಡಾ| ಅಗರಿ ನವೀನ್ ಭಂಡಾರಿ, ಮಾಜಿ ಮೇಯರ್ ಎಂ ಶಶಿಧರ್ ಹೆಗ್ಡೆ, ಉದ್ಯಮಿ ರೋಹನ್ ಮೊಂತೆರೋ, ಶಕೀಲಾ ಕಾವ, ಸಹಜ್ ರೈ ಬಳಜ್ಜ, ಮಾಜಿ ಮೇಯರ್ ಭಾಸ್ಕರ್ ಉದ್ಘಾಟನಾ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ರುಚಿಯಾದ, ಶುಚಿಯಾದ, ಬಿಸಿಯಾದ, ಸಿಹಿಯಾದ, ತಂಪಾದ, ಹಿತವಾದ ಆಹಾರ ವಿಹಾರಕ್ಕಾಗಿ ಸೇರುವ ವಿಶಾಲವಾದ ಅಚ್ಚುಕಟ್ಟಾದ ಪರಿಸರ ಇದಾಗಿದ್ದು, ಜನಮಾಸದ ಹಸಿವು ನೀಗುವ ಕಾವೇಶ್ವರದಲಿ ಅನ್ನಪೂರ್ಣೆ ಕೃಪೆಯಾಗಲಿ ಸದಾಪೂರ್ಣೆಯಾಗಿ ನೆಲೆಯಾಗಲಿ ಎಂದು ನಾವೆಲ್ಲರೂ ಶುಭ ಹಾರೈಸೋಣ.































































































































