
ಬಡತನವನ್ನು ಅನುಭವಿಸಿದ ತಾನು ಬಡವರ ಸಂಕಷ್ಟಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅವರ ಮುಖದಲ್ಲಿ ನಗು ಕಾಣುವ ಕುರಿತು ಚಿಂತಿಸುತ್ತಾ ಒಂದಿಲ್ಲೊಂದು ವಿಧದಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ತಾನು ಮಾಡಿದ ದಾನ ಧರ್ಮಗಳ ಬಗ್ಗೆ ಎಲ್ಲಿಯೂ ಹೇಳಿಕೊಳ್ಳದೆ ಆತ್ಮಸಂತೋಷ ಪಟ್ಟುಕೊಳ್ಳುವ ಜಾಯಮಾನ ಡಾ| ದೀಪಕ್ ಶೆಟ್ಟಿ ಬಾರ್ಕೂರು ಹಾಗೂ ಹೆಗ್ಗುಂಜೆ ಅಮರನಾಥ ಶೆಟ್ಟಿಯವರದ್ದು. ಜೀವನದಲ್ಲಿ ಸ್ಪಷ್ಟ ಉದ್ದೇಶ ಮತ್ತು ಅಬೇಧ್ಯ ಲಕ್ಷ್ಯ ಇದ್ದರೆ ಏನನ್ನಾದರೂ ಸಾಧಿಸಬಹುದೆನ್ನುವುದಕ್ಕೆ ಉದಾಹರಣೆಯಾಗಬಲ್ಲ ಮಹಾದಾನಿಗಳು, ಕಲೆ ಸಂಸ್ಕೃತಿ ಪೋಷಕರು, ಸ್ವಜನರ ಯೋಗ ಕ್ಷೇಮಕ್ಕೆ ಬೇಕಾಗಿ ಹಗಲಿರುಳು ಜೀವ ತೇವ ಅಪರೂಪದ ವ್ಯಕ್ತಿತ್ವವಿರುವ ವಿದ್ಯಾವಂತ ಯುವ ಉದ್ಯಮಿಗಳಾದ ದೀಪಕ್ ಶೆಟ್ಟಿ ಹಾಗೂ ಅಮರನಾಥ್ ಶೆಟ್ಟಿಯವರು ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಗೌರವ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಜ್ಜಾಗುತ್ತಿದ್ದಾರೆ. ಇಬ್ಬರಿಗೂ ಬೆಂಗಳೂರು ಬಂಟರ ಸಂಘದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವಿದೆ.


ಓರ್ವ ಜನಪರ ಕಾಳಜಿಯ ಸಮಾಜ ಸೇವಕರಾಗಿ, ಅಪ್ರತಿಮ ಸಂಘಟಕರೂ ಆಗಿ ಜನಾನುರಾಗಿಯಾದ ಅತ್ಯಂತ ಸರಳ ಸ್ವಭಾವದ ವಿನಮ್ರ ಭಾವ ಹೊಂದಿದ, ಗುರುಹಿರಿಯರನ್ನು ಅಪಾರ ಗೌರವದಿಂದ ಕಾಣುವ, ಬಡವರ ಆರ್ತರ ಕಣ್ಣೀರೊರಸುವ ಗುಣಗಳಿಂದ ಹುಟ್ಟೂರಲ್ಲಿ ಹಾಗೂ ಬೆಂಗಳೂರಿನಲ್ಲಿ ಎಲ್ಲರಿಗೂ ಆಪ್ತರಾಗಿ ಆಪತ್ಬಾಂಧವರಾಗಿ ಗುರುತಿಸಿಕೊಂಡ ದೀಪಕ್ ಶೆಟ್ಟಿ ಹಾಗೂ ಅಮರನಾಥ ಶೆಟ್ಟಿಯವರು ಚುನಾವಣೆಯಲ್ಲಿ ಗೆಲ್ಲಲಿ, ಪ್ರತಿ ಬಂಟನ ಮನಸ್ಸನ್ನು ಗೆದ್ದು ಬೆಂಗಳೂರು ಬಂಟರ ಸಂಘವನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.





























































































































