



ಸಿಸ್ಟರ್ಸ್ ಡೇ ಪ್ರಯುಕ್ತ ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನರ್ಸ್ಗಳ ಸೇವೆಯನ್ನು ಗೌರವಿಸುವ ಉದ್ದೇಶದಿಂದ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ರೋಟರಿ ಹಾಸ್ಪಿಟಲ್ ಹಾಗೂ ಸಿಟಿ ಹಾಸ್ಪಿಟಲ್ ಗೆ ಭೇಟಿ ನೀಡಿ ಸುಮಾರು 45 ಮಂದಿ ಸಿಸ್ಟರ್ಸ್ರಿಗೆ ಹೂವು ಹಾಗೂ ಸಿಹಿ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ರೋ. ಕೆ. ನವೀನ್ ಚಂದ್ರ ಶೆಟ್ಟಿಯವರು ಮಾತನಾಡಿ, ರೋಗಿಗಳ ಆರೈಕೆ ಮತ್ತು ಆರೋಗ್ಯ ಸೇವೆಯಲ್ಲಿ ನರ್ಸ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ಪ್ರಾಮಾಣಿಕತೆ, ಸಹನೆ ಹಾಗೂ ಮಾನವೀಯ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಅಭಿನಂದನಾ ಮಾತುಗಳನ್ನಾಡಿದರು.


ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞೆ ರೋ. ಡಾ. ಆಶಾ ಹೆಗ್ಡೆ, ಮಾಜಿ ಅಧ್ಯಕ್ಷ ರೋ. ಇಕ್ಬಾಲ್ ಅಹಮದ್, ರೋ. ಸುಬ್ರಮಣ್ಯ ದೇವಾಡಿಗ, ರೋ. ಚೇತನ್ ಕುಮಾರ್, ಕಾರ್ಯದರ್ಶಿ ರೋ. ಚೇತನ್ ನಾಯಕ್ ಹಾಗೂ ರೋಟರಿ ಹಾಸ್ಪಿಟಲ್ ನ ಅಶ್ಲೋನ್ ಅಲ್ಮಡಿಯಾ ಉಪಸ್ಥಿತರಿದ್ದರು.

























































































































