

ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಉದ್ಯಮಿ ವಿ ಪ್ರಸಾದ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸುಮಾರು 2 ಲಕ್ಷ ಸದಸ್ಯರನ್ನು ಹೊಂದಿದ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯು 1941 ರಲ್ಲಿ ಪ್ರಾರಂಭಗೊಂಡಿದ್ದು, ದೇಶಾದ್ಯಂತ 264 ಶಾಖೆಯನ್ನು ಹೊಂದಿದೆ. ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿಯಾಗಿ ಕೆ ವರುಣ್ ಶೆಟ್ಟಿ, ಕೋಶಾಧಿಕಾರಿಯಾಗಿ ಅಲೆವೂರು ದಿನೇಶ್ ಕಿಣಿ, ಜೊತೆ ಕಾರ್ಯದರ್ಶಿಗಳಾಗಿ ಏಕಾನಾಥ್ ಬೋಳಾರ್ ಮತ್ತು ಅಶ್ವಿನ್ ಕುಂದರ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸಿದ್ಧರಾಜು, ಜನರಲ್ ಕೌನ್ಸಿಲ್ ಸದಸ್ಯರಾಗಿ ಎನ್.ಎಮ್ ಹೆಗ್ಡೆ, ಉಪಾಧ್ಯಕ್ಷರಾಗಿ ಕೆ ಪ್ರಕಾಶ್ ಬೆಟ್ಟಿನ್ ಹಾಗೂ ರಾಜಗೋಪಾಲ್ ಎಸ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅರುಣ್ ಕುಮಾರ್ ಹೆಗ್ಡೆ, ಹರಿಪ್ರಸಾದ್ ರೈ, ರಂಜನ್ ಕೆ ಮತ್ತು ಎಸ್ ಉಮರ್ ಆಯ್ಕೆಯಾಗಿದ್ದಾರೆ.



























































































































