
ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಸ್ಟೀರಿಂಗ್ ಕನ್ಸೋರ್ಟಿಯಂ (ಕೆಪಿಸಿಇ – ಎಸ್.ಸಿ) ಸಂಸ್ಥೆಯ 2026-28 ರ ಅವಧಿಯ ಚುನಾವಣೆ ಇತ್ತೀಚೆಗೆ ನಡೆದಿದ್ದು, ರಾಜ್ಯದ ನಾನಾ ಹುದ್ದೆಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮೂಲ್ಕಿ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಅಧ್ಯಕ್ಷ ಹಾಗೂ ಮೂಲ್ಕಿ ಶಾರದಾ ಗ್ರೂಪ್ ನ ಸಿಎಂಡಿ ಮೂಲ್ಕಿ ಜೀವನ್ ಕೆ ಶೆಟ್ಟಿ ಅವರು ಮೈಸೂರು ರೆವೆನ್ಯೂ ಡಿವಿಜನ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ಸಂಸ್ಥೆಯು ರಾಜ್ಯದಲ್ಲಿ ಸಿವಿಲ್ ಇಂಜಿನಿಯರ್ ಗಳ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮಾರ್ಗದರ್ಶನ ನೀಡುವ ಪ್ರಮುಖ ವೇದಿಕೆ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವುದು, ಇಂಜಿನಿಯರ್ ಗಳ ನೋಂದಣಿ ಮತ್ತು ಜವಾಬ್ದಾರಿತ್ವವನ್ನು ವ್ಯವಸ್ಥಿತಗೊಳಿಸುವುದು, ನೈತಿಕ ಮೌಲ್ಯಗಳು ಮತ್ತು ಗುಣಮಟ್ಟದ ನಿರ್ಮಾಣವನ್ನು ಉತ್ತೇಜಿಸುವುದು, ಸರಕಾರ ಶಿಕ್ಷಣ ಸಂಸ್ಥೆಗಳು ಮತ್ತು ಇಂಜಿನಿಯರ್ ಗಳ ನಡುವೆ ಸಮನ್ವಯ ಸಾಧಿಸುವುದು, ದೇಶದಲ್ಲಿ ಸಿವಿಲ್ ಇಂಜಿನಿಯರ್ ಕೌನ್ಸಿಲ್ ರಚನೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುವುದು, ದೇಶದಲ್ಲಿ ಸಿವಿಲ್ ಪಠ್ಯ ವಿಷಯದಲ್ಲಿ ಪರಿವರ್ತನೆ ಮಾಡುವಲ್ಲಿ ಪ್ರಯತ್ನ ಮಾಡುವುದು, ಬಿಐಎಸ್ ನೊಂದಿಗೆ ಸಮಾಲೋಚನೆ ನಡೆಸಿ ಎನ್ಬಿಸಿ 2016ನ್ನು ಡೈಲ್ಶೂಷನ್ ಮಾಡದಂತೆ ಒತ್ತಾಯಿಸುವುದು ಸಂಸ್ಥೆಯ ಮುಖ್ಯ ಉದ್ದೇಶ.
ಚುನಾವಣೆಯನ್ನು ರೆಟಾರ್ನಿಂಗ್ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ನಡೆಸಲಾಗಿದ್ದು, ಎಲ್ಲಾ ಹುದ್ದೆಗಳಿಗೂ ಏಕಮತದ ಆಯ್ಕೆ ನಡೆದಿರುವುದು ಸದಸ್ಯರ ಏಕತೆ ಮತ್ತು ಸಹಕಾರವನ್ನು ತೋರಿಸುತ್ತದೆ. ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ರಾಜ್ಯದಲ್ಲಿ ಸಿವಿಲ್ ಇಂಜಿನಿಯರಿಂಗ್ ವೃತ್ತಿಯ ಅಭಿವೃದ್ಧಿ ಮತ್ತು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕೊಡುಗೆ ನೀಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ.

























































































































