
ಥಾಣೆ ಬಂಟ್ಸ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಅಸೋಸಿಯೇಷನ್ ಆಫ್ ಬಂಟ್ಸ್ ಡಾಕ್ಟರ್ಸ್ ಸಹಯೋಗದಲ್ಲಿ ಏಪ್ರಿಲ್ 19 ರಂದು ಭಾನುವಾರ ಥಾಣೆ ಹರಿನಿವಾಸ್ ಬಳಿಯ ಥಾಣೆ ಬಂಟ್ಸ್ ಕಚೇರಿಯಲ್ಲಿ ಬೆಳಿಗ್ಗೆ 9.30 ರಿಂದ ಅಪರಾಹ್ನ 3 ಗಂಟೆಯವರೆಗೆ ನುರಿತ ವೈದ್ಯರ ತಂಡದಿಂದ ಬೃಹತ್ ರಕ್ತದಾನ ಶಿಬಿರವು ನಡೆಯಲಿದೆ.
ಈ ರಕ್ತದಾನ ಶಿಬಿರದಲ್ಲಿ ಬಂಟ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಥಾಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಎಂ ಶೆಟ್ಟಿ, ಅಸೋಸಿಯೇಷನ್ ಆಫ್ ಬಂಟ್ಸ್ ಡಾಕ್ಟರ್ಸ್ ಅಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ, ಥಾಣೆ ಬಂಟ್ಸ್ ಅಸೋಸಿಯೇಷನ್ ವೈದ್ಯಕೀಯ ವಿಭಾಗದ ಕಾರ್ಯಾಧ್ಯಕ್ಷ ವಿನಯ್ ಪಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಿನೀತ್ ಆರ್ ಶೆಟ್ಟಿ ಹಾಗೂ ಎಲ್ಲಾ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.



























































































































