
ಎಂ.ಆರ್.ಜಿ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ| ಕೆ ಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಮಗ್ರ ಪುನರ್ ನಿರ್ಮಾಣಗೊಂಡು ಹೊಸ ರೂಪವನ್ನು ಹೊಂದಲಿರುವ ಪಡುಬಿದ್ರೆಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಬಹುರಾಷ್ಟ್ರೀಯ ಸಂಸ್ಥೆಯಾದ ಆಸ್ಪೆನ್ ಇನ್ಫ್ರಾದಿಂದ 25 ಲಕ್ಷ ರೂಪಾಯಿಗಳ ದೇಣಿಗೆ ಸಮರ್ಪಿತವಾಯಿತು. ಜೀರ್ಣೋದ್ಧಾರ ಹಾಗೂ ಪುನರ್ ನಿರ್ಮಾಣ ಕಾರ್ಯಗಳು ಅಂತಿಮ ಹಂತ ತಲುಪಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ಏಪ್ರಿಲ್ 23ರಿಂದ ಮೇ 4ರ ವರೆಗೆ ನಡೆಯಲಿದ್ದು, ಈ ಮಹಾನ್ ಕಾರ್ಯಗಳಿಗೆ ನೆರವು ನೀಡುವ ನೆಟ್ಟಿನಲ್ಲಿ ಪಡುಬಿದ್ರಿಯ ವಿಶೇಷ ವಿತ್ತ ವಲಯದಲ್ಲಿನ ಆಸ್ಪೆನ್ ಇನ್ಫ್ರಾ ಕಂಪನಿಯ 25 ಲಕ್ಷ ರೂಪಾಯಿಗಳ ದೇಣಿಗೆಯನ್ನು ಪಡುಬಿದ್ರಿ ಶ್ರೀ ದೇಗುಳದ ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿ ಶಂಕರ ಹೆಗ್ಡೆ ಅವರಿಗೆ ಕಂಪನಿಯ ಹಿರಿಯ ಮಹಾ ಪ್ರಬಂಧಕ ಹಾಗೂ ಮುಖ್ಯಸ್ಥ ಅಶೋಕ್ ಶೆಟ್ಟಿ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ವ್ಯಾಸ ಆಚಾರ್ಯ, ಕೇಶವ ತಂತ್ರಿ, ನವೀನ್ ಚಂದ್ರ ಜೆ ಶೆಟ್ಟಿ, ಸುರೇಶ್ ಶೆಟ್ಟಿ ಗುಂಡ್ಲಾಡಿ, ಮಾಧವ ಶೆಟ್ಟಿ, ಸುರೇಶ್ ಪಡುಬಿದ್ರಿ, ಪ್ರಚಾರ ಸಮಿತಿಯ ಸಂಚಾಲಕ ರಾಮಚಂದ್ರ ಆಚಾರ್ಯ ಮತ್ತಿತರಿದ್ದರು.

























































































































