
ಪ್ರಸ್ತುತ ದಿನಮಾನದಲ್ಲಿ ರಜಾ ಸಮಯವನ್ನು ಮಕ್ಕಳು ಕೇವಲ ಮೊಬೈಲ್ ಗೆ ದಾಸರಾಗಿ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ ತಮ್ಮ ಅಮೂಲ್ಯ ಬಾಲ್ಯದ ಕ್ಷಣಗಳನ್ನು ವ್ಯರ್ಥವಾಗಿ ಕಳೆಯುತ್ತಿದ್ದಾರೆ. ಇದು ಪ್ರಸ್ತುತ ಹೆತ್ತ ತಂದೆ ತಾಯಿಯರಿಗೂ ಮಕ್ಕಳ ಈ ವರ್ತನೆ ನುಂಗಲಾರದ, ಅರಗಿಸಿಕೊಳ್ಳಲಾಗದ ನೋವಿನ ಕ್ಷಣಗಳು ಹೌದು. ಈ ನಿಟ್ಟಿನಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆರಂಭಗೊಳ್ಳಲಿರುವ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನಲ್ಲಿ ಮಕ್ಕಳು ತಮ್ಮ ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬ ಧ್ಯೇಯವನ್ನು ಇಟ್ಟುಕೊಂಡು ಇದೇ ಬರುವ ಏಪ್ರಿಲ್ 2,3,4 2026 ರಂದು ಮಕ್ಕಳ ವಿಶೇಷ ಶಿಬಿರ ಚಿಲಿಪಿಲಿ -2026 ನಡೆಯಲಿದೆ. ಇಂದಿನ ಸ್ಕ್ರೀನ್ ಟೈಮ್ ಯುಗದಲ್ಲಿ ಮಕ್ಕಳು ತಮ್ಮ ಬಾಲ್ಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವಾಗ ಈ ಶಿಬಿರವು ನೆನಪುಗಳನ್ನು ಸೃಷ್ಟಿಸಲು, ಸೃಜನಶೀಲತೆಯನ್ನು ಹೆಚ್ಚಿಸಲು, ಸ್ನೇಹಿತರನ್ನು ಮಾಡಿಕೊಳ್ಳಲು, ಹೊಸ ಆಸಕ್ತಿಗಳನ್ನು ಕಂಡುಕೊಳ್ಳಲು ಒಟ್ಟಾರೆಯಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಶಿಬಿರವು ಮಕ್ಕಳಿಗೆ ಅತ್ಯಂತ ಮಹತ್ವವುಳ್ಳದ್ದಾಗಿದೆ. ಮಾತ್ರವಲ್ಲದೇ 90 ರ ದಶಕದ ಜೀವನ ಕೌಶಲ್ಯ ಚಟುವಟಿಕೆಗಳು ಮಕ್ಕಳಿಗೆ ಅಂಕಗಳ ಭಯವಿಲ್ಲದೆ ಹೊಸ ವಿಷಯಗಳನ್ನು ಪ್ರಯತ್ನಿಸಲು ಅವಕಾಶ ನೀಡುತ್ತದೆ.


ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಈ ಶಿಬಿರಕ್ಕೆ ನೋಂದಾಯಿಸಲು ಕೋರಲಾಗಿದೆ. ‘ಇದು ಕೇವಲ ಶಿಬಿರವಲ್ಲ ಮುಗ್ಧ ಮನಸುಗಳ ಸೃಜನಶೀಲತೆಯನ್ನು ಬೆಳೆಸುವ ಸುಂದರ ತೋಟ’
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +919036854942

























































































































