

ಕಳೆದ ಮೂರು ವರ್ಷಗಳಿಂದ ಆಳ್ವಾಸ್ ಆನಂದಮಯ ಆರೋಗ್ಯಧಾಮ ಆಯೋಜಿಸಿಕೊಂಡು ಬರುತ್ತಿರುವ ಬೇಸಿಗೆ ಶಿಬಿರ ‘ಚಿಣ್ಣರ ಆರೋಗ್ಯ’ ಏಪ್ರಿಲ್ 01 ರಿಂದ 07 ರವರೆಗೆ ಮಿಜಾರಿನ ಶೋಭಾವನ ಆವರಣದಲ್ಲಿರುವ ಆನಂದಮಯ ಆರೋಗ್ಯಧಾಮದಲ್ಲಿ ನಡೆಯಲಿದೆ. ಈ ಶಿಬಿರವು ಪ್ರಕೃತಿ ಚಿಕಿತ್ಸೆಯ ತತ್ವಗಳು ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಮಕ್ಕಳ ಮನಸ್ಸು ಮತ್ತು ದೇಹವನ್ನು ಪೋಷಿಸುವಂತೆ ವಿನ್ಯಾಸಗೊಳಿಸಲಾಗಿದೆ. ಮಕ್ಕಳು ಸರಳ ಮತ್ತು ನೈಸರ್ಗಿಕ ಚಿಕಿತ್ಸೆಗಳ ಬಗ್ಗೆ ಅನುಭವಾತ್ಮಕವಾಗಿ ಕಲಿಯುವ ಜೊತೆಗೆ ವಿವಿಧ ಮನೋರಂಜನಾತ್ಮಕ ಚಟುವಟಿಕೆಗಳು ಸದಾ ಮಕ್ಕಳನ್ನು ಚುರುಕಾಗಿಯೂ, ಕುತೂಹಲದಿಂದ ಕೂಡಿರುವಂತೆ ಮಾಡುತ್ತದೆ. ಭಾಗವಹಿಸುವವರಿಗೆ ಪೌಷ್ಟಿಕಾಂಶಯುಕ್ತ ಊಟ, ಆರೋಗ್ಯಕರ ತಿಂಡಿ ತಿನಿಸುಗಳು ಮತ್ತು ನೈಸರ್ಗಿಕ ಪಾನೀಯಗಳನ್ನು ಒದಗಿಸಲಾಗುತ್ತದೆ.


ಶಿಬಿರದಲ್ಲಿ ಯೋಗಾಭ್ಯಾಸ, ಪ್ರಾಣಿ ಪಕ್ಷಿಗಳ ಆಸನಗಳು, ಸೂರ್ಯ ನಮಸ್ಕಾರ, ಸ್ಮರಣಶಕ್ತಿ ವೃದ್ಧಿಗೆ ಮೆಮೊರಿ ಗೇಮ್ಸ್, ಏಕಾಗ್ರತೆ ಹೆಚ್ಚಿಸಲು ಪ್ರಾಣಾಯಾಮ, ಉಸಿರಾಟ ವ್ಯಾಯಾಮಗಳು ಸೇರಿದಂತೆ ಹಲವಾರು ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಜೊತೆಗೆ ಕಲೆ, ಕರಕುಶಲ ಕಲೆ, ನೃತ್ಯ, ಸಂಗೀತ ಮತ್ತು ಚಿತ್ರಕಲೆ ಚಟುವಟಿಕೆಗಳ ಮೂಲಕ ಮಕ್ಕಳ ಸೃಜನಶೀಲತೆಯನ್ನು ಉತ್ತೇಜಿಸಲಾಗುತ್ತದೆ. ಆರೋಗ್ಯಕರ ಜೀವನಶೈಲಿಯ ಕುರಿತು ಅರಿವು ಮೂಡಿಸಲು ಪೌಷ್ಟಿಕ ಆಹಾರ ಮತ್ತು ಆರೋಗ್ಯಕರ ಬದುಕಿನ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಮಡ್ ಥೆರಪಿ ಹಾಗೂ ಗ್ರಾಟಿಟ್ಯೂಡ್ ಅಟಿಟ್ಯೂಡ್ (ಕೃತಜ್ಞತೆ ಮನೋಭಾವ) ಬೆಳೆಸುವ ತರಬೇತಿಗಳೂ ಶಿಬಿರದ ವಿಶೇಷ ಆಕರ್ಷಣೆಯಾಗಿವೆ. ಇದರೊಂದಿಗೆ ಜುಂಬಾ ತರಗತಿಗಳು ಮತ್ತು ತಜ್ಞ ವೈದ್ಯರಿಂದ ವಿಶಿಷ್ಟ ಹಾಗೂ ಸೃಜನಾತ್ಮಕ ತರಗತಿಗಳನ್ನು ನಡೆಸಲಾಗುತ್ತದೆ. ಕ್ಯಾಂಪ್ನ ಕೊನೆಯಲ್ಲಿ ‘ಗ್ರ್ಯಾಜುವೇಷನ್ ಡೇ’ ಆಚರಿಸಲಾಗುತ್ತದೆ. ಆ ದಿನ ಮಕ್ಕಳಿಗೆ ಆಕರ್ಷಕ ಗಿಫ್ಟ್ ಗಳು, ಬಹುಮಾನಗಳು ಹಾಗೂ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಶಿಬಿರದಲ್ಲಿ ಭಾಗವಹಿಸುವವರಿಗೆ ರೂ 1500 ಶುಲ್ಕವನ್ನು ನಿಗದಿಪಡಿಸಲಾಗಿದೆ. 6 ವರ್ಷದಿಂದ ಮೇಲ್ಪಟ್ಟ ಹಾಗೂ 12 ವರ್ಷದೊಳಗಿನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ನೋಂದಣಿಗಾಗಿ 7259105460, 9995333677 ಸಂಖ್ಯೆಗಳನ್ನು ಸಂಪರ್ಕಿಸಬಹುದು.

























































































































