
ಮನೋಜ್ ಶೆಟ್ಟಿ ಮಾಲಕತ್ವದ ಕಾರ್ಸ್ ಅಡ್ಡ ಫೈನಾನ್ಸ್ ಹೌಸ್ ಇದರ ಅಂಗ ಸಂಸ್ಥೆಯಾದ ‘ಕಾರ್ಸ್ ಅಡ್ಡ ಸೇವಾ ಟ್ರಸ್ಟ್’ ಮಂಗಳೂರು ವತಿಯಿಂದ ಸಾಮಾಜಿಕ ಸೇವಾ ಯೋಜನೆಯ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಉತ್ತೇಜನಕ್ಕಾಗಿ ವಿದ್ಯಾರ್ಥಿಗಳಿಗೆ (1ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ) ಶೈಕ್ಷಣಿಕ ಪೂರಕ ವಸ್ತುಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದು, ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಬಹುದಾಗಿದೆ. ಏಪ್ರಿಲ್ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ವಿವರಗಳು:
* ವಿದ್ಯಾರ್ಥಿಯ ಹೆಸರು:
* ತರಗತಿ
* ಶೈಕ್ಷಣಿಕ ದಾಖಲೆಗಳು:
* ಆಧಾರ್ ಪ್ರತಿ
* ಹೆತ್ತವರ / ಪೋಷಕರ ಆಧಾರ್ ಪ್ರತಿ:
ಖುದ್ದಾಗಿ ಅರ್ಜಿ ಸಲ್ಲಿಸುವ ವಿಳಾಸ : ನಿರ್ದೇಶಕರು
ಕಾರ್ಸ್ ಅಡ್ಡ ಫೈನಾನ್ಸ್ ಹೌಸ್
ಪ್ರಧಾನ ಕಚೇರಿ, ಫಸ್ಟ್ ನ್ಯೂರೋ ಆಸ್ಪತ್ರೆಯ ಎದುರು, ಪಡೀಲ್, ಮಂಗಳೂರು


























































































































