
2002 ರಲ್ಲಿ ಕನ್ನಡ ಸಂಘ ಬಹರೈನ್ ನ ಕ್ರೀಡಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಹಾಗೂ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅನಂತರಾಮ್ ಶೆಟ್ಟಿ ಕೊಳ್ಕೆರೆ ಅವರು ಸಕುಟುಂಬ ಸಮೇತರಾಗಿ ಕನ್ನಡ ಭವನಕ್ಕೆ ಭೇಟಿ ನೀಡಿದರು. ಅನಂತರಾಮ್ ಶೆಟ್ಟಿ ಅವರು ಸಂಘದಲ್ಲಿ ಕಳೆದ ತಮ್ಮ ಅನುಭವಗಳನ್ನು ಸ್ಮರಿಸಿ, ಕನ್ನಡ ಭವನವನ್ನು ವೀಕ್ಷಿಸಿ ಸಂತೋಷ ವ್ಯಕ್ತಪಡಿಸಿದರು. ಕನ್ನಡ ಭವನದ ನಿರ್ಮಾಣ ಸಂದರ್ಭದಲ್ಲಿ ವೈಯಕ್ತಿಕವಾಗಿ ದೇಣಿಗೆಯನ್ನು ನೀಡಿ ಮಹತ್ವದ ಸಹಕಾರ ನೀಡಿದ್ದ ಅವರನ್ನು ಈ ಸಂದರ್ಭದಲ್ಲಿ ಸಂಘದ ವತಿಯಿಂದ ಶಾಲು, ಸ್ಮರಣಿಕೆ, ಕಾವೇರಿ ಸಂಚಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.



ಈ ಸಂದರ್ಭದಲ್ಲಿ ಅಭ್ಯಾಗತರಾದ ಡಾ. ಬಲ್ವಿಂದರ್ ಸಿಂಗ್ ಅವರನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷ ಅಜಿತ್ ಬಂಗೇರ, ನಿಕಟಪೂರ್ವ ಅಧ್ಯಕ್ಷ ಅಮರನಾಥ್ ರೈ ಹಾಗೂ ಮಾಜಿ ಅಧ್ಯಕ್ಷ ಪ್ರದೀಪ್ ಶೆಟ್ಟಿ ಅವರು ಉಪಸ್ಥಿತರಿದ್ದು, ಔಪಚಾರಿಕವಾಗಿ ಮಾತನಾಡಿದರು.



















































































































