ಈಗಾಗಲೇ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರಾಗಿರುವ ಹೊಟೇಲ್ ಶೀತಲ್ ಪುಣೆ ಇದರ ಸಿ.ಎಂ.ಡಿ ವಿಶ್ವನಾಥ ಶೆಟ್ಟಿಯವರ ಧರ್ಮಪತ್ನಿ ಬಂಟರ ಸಂಘ ಪುಣೆಯ ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆ ಶ್ರೀಮತಿ ಸಂಧ್ಯಾ ವಿಶ್ವನಾಥ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಮತ್ತು ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ಪೋಷಕ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. ಇನ್ನು ಮುಂದೆ ದಂಪತಿಗಳು ಇಬ್ಬರೂ ಸಹ ಒಕ್ಕೂಟದ ಪೋಷಕ ಸದಸ್ಯರಾಗಿರುತ್ತಾರೆ.
