ಮೀರಾ ಭಯಂದರ್ ನ ಹೆಸರಾಂತ ವೀರ ಕೇಸರಿ ಸಂಸ್ಥೆಯು ನಾಸ್ತಿಕ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಸದಾ ಕಾಪಾಡಿಕೊಳ್ಳುವಲ್ಲಿ ನಿರಂತರ ಶ್ರಮಿಸುತ್ತಿರುವ ಸಂಸ್ಥೆ. ಈ ಸಂಸ್ಥೆಯ ವತಿಯಿಂದ ಕಳೆದ ವರ್ಷ ಸಂಪೂರ್ಣ ರಾಮಾಯಣ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿ ಇದೀಗ ಭಗವದ್ಗೀತೆಯ ಪರೀಕ್ಷೆಯನ್ನು ಕನ್ನಡ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಕಳೆದ ಜುಲೈ 20 ರಂದು ವಿಧ್ವಾನ್ ಶ್ರೀ ರಾಧಾಕೃಷ್ಣ ಭಟ್ ರವರ ಮಾರ್ಗದರ್ಶನದೊಂದಿಗೆ ಮತ್ತು ಶ್ರೀ ಸಾಣೂರು ಸಾಂತಿಂಜ ಜನಾರ್ದನ್ ಭಟ್ ಆಶೀರ್ವಾದದಿಂದ ಹಾಗೂ ವೀರ ಕೇಸರಿ ಮೀರಾ ಭಯಂದರ್ ನ ಅಧ್ಯಕ್ಷರಾದ ಹರೀಶ್ ರೈಯವರ ನೇತೃತ್ವದಲ್ಲಿ ಭಯಂದರ್ ಸೈಂಟ್ ಆಗ್ನೇಸ್ ಇಂಗ್ಲಿಷ್ ಹೈಸ್ಕೂಲ್ ಇಲ್ಲಿ ಆಯೋಜಿಸಲಾಗಿತ್ತು. ಈ ಪರೀಕ್ಷೆಯ ಫಲಿತಾಂಶದ ಅಂಗವಾಗಿ ಸಂಸ್ಥೆಯ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮವು ನವೆಂಬರ್ 15 ರಂದು ಜಿ 9, ಸ್ಪೋರ್ಟ್ಸ್ ಟರ್ಫ್ ಹಾಗೂ ಲ್ಹಾನ್ ಇಂದ್ರಲೋಕ ಕಲಾವತಿ ಮಂದಿರದ ಬಳಿ, ಭಯಂದರ್ ಇಂದ್ರಲೋಕ ನಾಕಾ ಇಲ್ಲಿ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು, ಕನ್ನಡ ಮತ್ತು ಹಿಂದಿ ಭಾಷೆಗಳ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಂಜೆ 4:00ಕ್ಕೆ ಗಣ್ಯರ ಸಮ್ಮುಖದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ವಿಧ್ವಾನ್ ಶ್ರೀ ರಾಧಾಕೃಷ್ಣ ಭಟ್ ಹಾಗೂ ಸಾಣೂರು ಸಾತಿಂಜ ಜನಾರ್ಧನ್ ಭಟ್ ಅವರಿಂದ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಶುಭಾರಂಭಗೊಳ್ಳಲಿದೆ. ತದನಂತರ ನೃತ್ಯ ಸ್ಪರ್ಧೆಯು ನಡೆಯಲಿರುವುದು. ನಿಯಮಾವಳಿಯ ಪ್ರಕಾರ ನೃತ್ಯ ಸ್ಪರ್ಧೆಯಲ್ಲಿ, ಭಕ್ತಿ ಗೀತೆಗೆ ಪ್ರಾಧಾನ್ಯತೆ ನೀಡಲಾಗುವುದು. ಪ್ರತಿಯೊಂದು ತಂಡದಲ್ಲಿ ಕನಿಷ್ಠ 10 ಮಂದಿ ಕಡ್ಡಾಯವಾಗಿ ಇರತಕ್ಕದ್ದು. 7 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಭಕ್ತಿ ಗೀತೆಯ ಪೆನ್ ಡ್ರೈವ್ ಆಯೋಜಕರಿಗೆ ಮೊದಲೇ ನೀಡತಕ್ಕದ್ದು. ಮೊದಲು ಹೆಸರು ನೊಂದಾಯಿಸಿದ 10 ತಂಡಗಳಿಗೆ ಮೊದಲ ಪ್ರಾಧ್ಯಾನತೆ. ಭಾಗವಹಿಸಿದ ತಂಡಗಳಿಗೆ ಪ್ರೋತ್ಸಾಹಕರ ಧನವನ್ನು ನೀಡಲಾಗುವುದು. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ ಹಾಗೂ ಯಾವುದೇ ಚರ್ಚೆಗೆ ಆಸ್ಪದವಿಲ್ಲ.
ನೃತ್ಯ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಲಾಗುವುದು. ವಿಜೇತ ತಂಡಕ್ಕೆಪ್ರಥಮ ಬಹುಮಾನ ರೂ.15000, ದ್ವಿತೀಯ ಬಹುಮಾನ ರೂ.10000, ತೃತೀಯ ಬಹುಮಾನ ರೂ.7,000 ನೀಡಲಾಗುವುದು. ಸಭಾ ಕಾರ್ಯಕ್ರಮದಲ್ಲಿ ಭಗವದ್ಗೀತೆ ಪರೀಕ್ಷೆಯ ಫಲಿತಾಂಶವನ್ನು ಘೋಷಿಸಲಾಗುವುದು. ಎಲ್ಲಾ 4 ವಿಭಾಗದ ವಿಜೇತರಿಗೆ ಪಾರಿತೋಷಕ, ನಗದು ಬಹುಮಾನ ನೀಡಲಾಗುವುದು.
ತಂಡದ ಹೆಸರು ನೊಂದಾಯಿಸುವರು ಸುಜಾತ ಶೆಟ್ಟಿ 7977294274, ರಾಜೇಶ್ ಶೆಟ್ಟಿ ಕಾಪು 9820953404, ಭಾರತಿ ಉಡುಪ 99694 48171, ರೂಪ ಭಟ್ಕಳ್ 9769857829 ಇವರುಗಳನ್ನು ಸಂಪರ್ಕಿಸಬಹುದು. ಹೆಸರು ನೊಂದಾಯಿಸಲಿಚ್ಛಿಸುವ ತಂಡಗಳು 20/10/2025 ರ ಮೊದಲು ತಮ್ಮ ತಂಡದ ಹೆಸರನ್ನು ಸೂಚಿಸತಕ್ಕದ್ದು. ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕೆಂದು ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಪ್ರಕಟನೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ವರದಿ : ವೈ ಟಿ ಶೆಟ್ಟಿ ಹೆಜಮಾಡಿ