ತುಳು ರಂಗಭೂಮಿ ಬದಲಾಗುತ್ತಿದೆ. ಸಾಮಾಜಿಕ ಮತ್ತು ಹಾಸ್ಯ ನಾಟಕಗಳಿಗೆ ಸೀಮಿತವಾಗಿದ್ದ ರಂಗಭೂಮಿ ಹೊಸ ಪ್ರಯೋಗಗಳನ್ನು ಪ್ರಾರಂಭಿಸುತ್ತಿದೆ. ತುಳು ರಂಗಭೂಮಿ ಭಕ್ತಿ ಪೌರಾಣಿಕದಿಂದ ಐತಿಹಾಸಿಕ, ಐತಿಹಾಸಿಕ ಮತ್ತು ನೈತಿಕ ನಾಟಕಕ್ಕೆ ಬದಲಾಗಿದೆ. ಕೃಷ್ಣ ಜಿ ಮಂಜೇಶ್ವರ ಇವರ ಶಾರದಾ ಕಲಾ ಕೂಟದ ಐಸಿರಿ ಕಲಾವಿದರು ಆಂಜನೇಯನ ಕಥೆಯೊಂದಿಗೆ ಧರ್ಮ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಯುವಕರ ತ್ಯಾಗವನ್ನು ತೋರಿಸಿದ್ದಾರೆ. “ಸು ಫ್ರಮ್ ಸೋ” ಚಿತ್ರದ ಬಾವ ಬಂದರೂ ಖ್ಯಾತಿಯ ಪ್ರಬುದ್ಧ ರಂಗಭೂಮಿ ಕಲಾವಿದ ಪುಷ್ಪರಾಜ್ ಬೊಳ್ಳಾರ್, ಚಂದ್ರಶೇಖರ್ ಸಾಯ ಬೇಡ್ರಗುಡ್ಡೆ, “ತುಳುನಾಡ್ ರಂಗ ಬೊಳ್ಳಿ” ರವಿ ರಾಮಕುಂಜ, “ಗಡಿನಾಡ ಅಭಿನಯ ರತ್ನ” ಅನಿಲ್ ರಾಜ್ ಉಪ್ಪಳ, ಅಶೋಕ್ ಬೇಕೂರ್ ಹಾಗೂ ಪ್ರಬುದ್ಧ ಕಲಾವಿದರುಗಳು ಅಭಿನಯಿಸಿರುವ ಈ ನಾಟಕವನ್ನು ವಿಕ್ರಮ್ ದೇವಾಡಿಗ ಚಿತ್ರಾಪುರ ನಿರ್ದೇಶಿಸಿದ್ದಾರೆ. ಈ ನಾಟಕದ ಸುಂದರ ಸಾಹಿತ್ಯವನ್ನು ರಾಜೇಶ್ ಮುಗುಳಿ ಬರೆದಿದ್ದಾರೆ. ಹಿನ್ನೆಲೆ ಸಂಗೀತ ಪ್ರವೀಣ್ ಕಾಣಿಯೂರು, ಧ್ವನಿ ಮತ್ತು ಬೆಳಕು ಅಕ್ಷತ್ ಕೊಂಡಾಣ, ಸಂಪತ್ ಸುವರ್ಣ ಬೆಳ್ತಂಗಡಿ ಅವರ ಸಹಕಾರದೊಂದಿಗೆ, ಒಳ್ಳೆಯ ಹೃದಯದ ಜನರ ಹಿತಕ್ಕಾಗಿ, ದುಷ್ಟಶಕ್ತಿಗಳ ನಾಶಕ್ಕಾಗಿ ಮತ್ತು ಶುದ್ಧ ಹಿಂದೂ ಧರ್ಮಕ್ಕೆ ಆಗುತ್ತಿರುವ ಅನ್ಯಾಯದ ನಾಶಕ್ಕಾಗಿ ಬರುತ್ತಿದ್ದಾನೆ ಜೈ ಭಜರಂಗ ಬಲಿ.

ಆದುನಿಕ ತಂತ್ರಜ್ಞಾನದ ವಿಶೇಷ ದೃಶ್ಯ ಸಂಯೋಜನೆಯೊಂದಿಗೆ ಪ್ರದರ್ಶನಗೊಂಡ ಎಲ್ಲಾ ಕಡೆ ಜನಮನಗೆದ್ದು ರಂಗಭೂಮಿಯಲ್ಲಿ ಸಂಚಲನ ಮೂಡಿಸಿದೆ. ಜೈ ಭಜರಂಗ ಬಲಿ ನಾಟಕವನ್ನು ವಿಶ್ವ ಹಿಂದೂ ಪರಿಷತ್ ಮಂಗಳೂರು ಇವರ ಸಂಯೋಜನೆಯಲ್ಲಿ ಇದೇ 15 ನೇ ತಾರೀಕು ಬುಧವಾರ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ. ಕಲಾಭಿಮಾನಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ ಮಾಡಿದ್ದಾರೆ. ಮೊದಲ ಪ್ರದರ್ಶನದಲ್ಲೇ ನಾಟಕ ಪ್ರೇಕ್ಷಕರ ಮನಗೆದ್ದಿದೆ. ಈಗ ನಾಟಕ ಪ್ರದರ್ಶನಕ್ಕೆ ಹಲವು ಕಡೆಯಿಂದ ಬೇಡಿಕೆ ಬಂದಿದೆ.





































































































