ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ ಮತ್ತು ನಗದು ಬಹುಮಾನಗಳನ್ನು ಪಡೆದರು. ಬಿಎ ವಿಭಾಗದಲ್ಲಿ ಕೆ ಎಸ್ ವಿಷ್ಣುಕುಮಾರ್ ಜಾನ್ ಎಫ್ ಕೆನಡಿ ಸ್ಮಾರಕ ಚಿನ್ನದ ಪದಕ, ಎನ್ ಅನಂತಾಚಾರ್ ಸ್ಮಾರಕ ಚಿನ್ನದ ಪದಕ, ಎಂಇಎಸ್ ಕಾಲೇಜು ರಜತ ಮಹೋತ್ಸವ ಬಹುಮಾನ ಪಡೆದರು.

ಪಲ್ನಾಟಿ ಕಾವ್ಯ ಅವರು ಎಂ ಶ್ರೀನಿವಾಸ ಅಯ್ಯಂಗಾರ್ ಮತ್ತು ದೊರೆಸಾಲಮ್ಮ ಸ್ಮಾರಕ ಚಿನ್ನದ ಪದಕ, ಕೆನರಾ ಬ್ಯಾಂಕ್ ವಜ್ರ ಮಹೋತ್ಸವ ಸ್ಮಾರಕ ಬಹುಮಾನ, ಟಿ ಶಿವಣ್ಣ ಅಭಿನಂದನಾ ಸಮಿತಿ ಚಿನ್ನದ ಪದಕ ಪಡೆದರು. ಧನ್ಯರೆಡ್ಡಿ ಎಸ್ ಅವರು ಮಿಸಸ್ ಮೇರಿ ಕೋದಂಡ ರಾವ್ ಬಹುಮಾನ ಸ್ವೀಕರಿಸಿದರೆ, ಸಾರ್ವೀನ ಪಿ ಅವರು ಕೆನರಾ ಬ್ಯಾಂಕ್ ವಜ್ರ ಮಹೋತ್ಸವ ಬಹುಮಾನ ಗಳಿಸಿದರು ಎಂದು ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಕಾಲೇಜಿನ ಚೇರ್ಮನ್ ಆರ್ ಉಪೇಂದ್ರ ಶೆಟ್ಟಿ ತಿಳಿಸಿದರು.