ಆದರ್ಶಪ್ರಾಯ : ಶ್ಯಾಮಲ ಕುಂದರ್ ವಿದ್ಯಾರ್ಥಿ ಎಂಬ ನಾಣ್ಯ ಬಹುಮೂಲ್ಯವಾಗಲು ಶಿಕ್ಷಕರು ಮತ್ತು ಪೋಷಕರೆಂಬ ಎರಡು ಮುಖಗಳ ಪಾತ್ರ ಬಹುಮುಖ್ಯ. ಕನಸು ಹೊತ್ತ ವಿದ್ಯಾರ್ಥಿಗಳನ್ನು ಪೋಷಿಸುವ ಪೋಷಕರು, ವಿದ್ಯಾಭ್ಯಾಸ ನೀಡುವ ಶಿಕ್ಷಕರನ್ನು ನಾವು ಗೌರವಿಸಬೇಕು. ಈ ನಿಟ್ಟಿನಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಕಾರ್ಯ ಮೆಚ್ಚುವಂತಹದ್ದು. ಶಿಕ್ಷಣದ ಜೊತೆಜೊತೆಗೆ ಸಂಸ್ಕಾರ, ದೇಶಭಕ್ತಿ, ಮೌಲ್ಯಯುತ ಶಿಕ್ಷಣಕ್ಕೂ ಪ್ರಾಶಸ್ತ್ಯ ಕೊಡುತ್ತಿರುವುದು ಆದರ್ಶಪ್ರಾಯ ಎಂದು ರಾಷ್ಟಿçಯ ಮಹಿಳಾ ಅಯೋಗದ ಮಾಜಿ ಸದಸ್ಯರಾದ ಶ್ರೀಮತಿ ಶ್ಯಾಮಲಾ ಎಸ್ ಕುಂದರ್ ಹೇಳಿದ್ದಾರೆ. ಅವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬ್ರಹ್ಮಾವರ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಸಂಜೀವ ಶೆಟ್ಟಿ ಕೊರ್ಗಿ, ಬಿ.ಎಮ್.ಎಮ್.

ಪ್ರೌಢಶಾಲೆ ಕೂರಾಡಿಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಎಸ್ ಮೂರ್ತಿ ರಾವ್, ಶ್ರೀ ವಿಷ್ಣು ಮೂರ್ತಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಅನಂತ ಪದ್ಮನಾಭ ಭಟ್, ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್ ಶೇರ್ವೆಗಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್ ಶೇರ್ವೆಗಾರ್ ಮಾತನಾಡಿ ಜ್ಞಾನಸುಧಾ ಶೈಕ್ಞಣಿಕ ಸಾಧನೆಗಳನ್ನು ಶ್ಲಾಘಿಸಿದರು. ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಸಂಜೀವ ಶೆಟ್ಟಿ ಕೊರ್ಗಿ ತಮ್ಮ ಶಿಕ್ಷಕ ವೃತ್ತಿಯ ಅನುಭವ ಹಂಚಿಕೊoಡರು ಮಣಿಪಾಲ ಜ್ಞಾನಸುಧಾ ಪ್ರಾಂಶುಪಾಲರಾದ ಶ್ರೀ ಗಣೇಶ್ ಶೆಟ್ಟಿ ಸ್ವಾಗತಿಸಿದರು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಜ್ಯೋತಿ ಪದ್ಮನಾಭ ಬಂಡಿ ವೇದಿಕೆಯಲ್ಲಿದ್ದರು. ಮಣಿಪಾಲ ಜ್ಞಾನಸುಧಾ ಉಪಪ್ರಾಂಶುಪಾಲರಾದ ಶ್ರೀ ರವಿ ಜಿ ಮತ್ತು ಶ್ರೀ ಹೇಮಂತ, ಉಪನ್ಯಾಸಕ ಬಳಗ ಉಪಸ್ಥಿತರಿದ್ದರು. ಗಣಿತ ಶಾಸ್ತç ಉಪನ್ಯಾಸಕಿ ಕುಮಾರಿ ನಕ್ಷಾ ಕಲ್ಕೂರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





































































































