ಮೀರಾರೋಡ್ ಪೂನಮ್ ಸಾಗರ್, ಆಶೀರ್ವಾದ್ ಬಿಲ್ಡಿಂಗ್ ನಿವಾಸಿ ಕೊರಂಗ್ರಪಾಡಿ ದೊಡ್ಡಮನೆ ಕುಮಾರ್ ನಾರಾಯಣ ಶೆಟ್ಟಿ (78) ಯವರು ಜುಲೈ 15 ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಇಬ್ಬರು ಗಂಡು ಮಕ್ಕಳಾದ ಉದಯ ಹಾಗೂ ಉಲ್ಲಾಸ್ ಮತ್ತು ಮಗಳು ಕುತ್ಯಾರು ಅಂಜಾರು ಮನೆ ಉಷಾ ದಾಮೋದರ್ ಶೆಟ್ಟಿ ಹಾಗೂ ಬಂಟರ ಸಂಘ ಮುಂಬಯು ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷೆ ಅಮಿತಾ ಕಿಶೋರ್ ಶೆಟ್ಟಿ (ಸೋದರ ಮಾವ) ಸೇರಿದಂತೆ ಪರಿಸರದ ಅಪಾರ ವರ್ಗದ ಬಂಧು- ಬಳಗದವರನ್ನು ಅಗಲಿದ್ದಾರೆ.

ಕುಮಾರ್ ಶೆಟ್ಟಿಯವರ ನಿಧನಕ್ಕೆ ಕರ್ನಾಟಕ ಸಂಘ, ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿ, ಮೀರಾ ಭಯಂದರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಮೋದ್ ಸಾಮಂತ್ ಶೋಕವನ್ನು ವ್ಯಕ್ತಪಡಿಸಿದ್ದಾರೆ. ಮೃತರ ಅಂತಿಮ ಯಾತ್ರೆಯು ಅವರ ನಿವಾಸದಿಂದ ಜುಲೈ 16 ರ ಬುಧವಾರ ಬೆಳಿಗ್ಗೆ 8.30ಕ್ಕೆ ಹೊರಡಲಿದೆ.