ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ವತಿಯಿಂದ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ತಿಳಿಸಿದ್ದಾರೆ. ಸಂಘದ ಸದಸ್ಯರ ಮಕ್ಕಳಿಗೆ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 95 ಹಾಗೂ ಅದಕ್ಕಿಂತ ಹೆಚ್ಚು ಅಂಕ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ. 90 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ 2024-25ನೇ ಸಾಲಿನಲ್ಲಿ ಪಿ.ಯು.ಸಿ ಉತ್ತೀರ್ಣರಾಗಿ, 2025-26ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ / ಸ್ನಾತಕೋತ್ತರ ಪದವಿಗೆ ನೀಟ್ ಪರೀಕ್ಷೆಯ ಮುಖೇನ ಮತ್ತು ಇಂಜಿನಿಯರಿಂಗ್ / ಗಿeಣeಡಿಟಿಚಿಡಿಥಿ ಪದವಿ / ಸ್ನಾತಕೋತ್ತರ ಪದವಿಗೆ ರಾಜ್ಯ ಸಿ.ಇ.ಟಿ. ಪರೀಕ್ಷೆ ಮುಖೇನ ಸರಕಾರಿ ಕಾಲೇಜಿನಲ್ಲಿ ಎಡ್ಮಿಶನ್ ಪಡೆದ ವಿದ್ಯಾರ್ಥಿಗಳು ಹಾಗೂ ಕಾನೂನು ಪದವಿಯನ್ನು ಅಐಇಖಿ ಪರೀಕ್ಷೆ ಮುಖೇನ ಐಚಿತಿ ಕಾಲೇಜಿನಲ್ಲಿ ಮೆರಿಟ್ ಸೀಟ್ನಲ್ಲಿ ಎಡ್ಮಿಶನ್ ಪಡೆದ ವಿದ್ಯಾರ್ಥಿಗಳಿಂದ ಅಲ್ಲದೆ ಎಂ.ಎ/ಎಂ.ಕಾಂ./ಎಂ.ಬಿ.ಎ/ಎಂ.ಎಸ್.ಎಸ್ಸಿ/ಎಂ.ಇಡಿ ಪದವಿಯಲ್ಲಿ, ಪಾಲಿಟೆಕ್ನಿಕ್ ಡಿಪ್ಲೋಮಾ /ಐ.ಟಿ.ಐ/ಬಿ.ಪಿ.ಇ.ಡಿ/ಬಿ.ಇ.ಡಿ./ಡಿ.ಇ.ಡಿ ಕೋರ್ಸ್ಗಳಲ್ಲಿ ಮತ್ತು ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕೋರ್ಸ್ಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರದ ಅರ್ಜಿ ಕರೆಯಲಾಗಿದೆ.

ಪ್ರತಿಭಾ ಪುರಸ್ಕಾರದ ವಿವರಗಳು ಹಾಗೂ ಅರ್ಜಿಗಳು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಎಲ್ಲಾ ಶಾಖೆಗಳಲ್ಲಿ ಮತ್ತು ಸಂಘದ ಅಧಿಕೃತ ವೆಬ್ಸೈಟ್ ಲಭ್ಯವಿದ್ದು ಜುಲೈ 15, 2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸದಸ್ಯರು ಇದರ ಸದುಪಯೋಗ ಪಡೆಯುವಂತೆ ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.