ಬೆಂಗಳೂರು ಬಂಟರ ಸಂಘವು ಮೊದಲಿನಿಂದಲೂ ಸಾಮಾಜಿಕ ಕಳಕಳಿಯ ಸಂಸ್ಥೆಯಾಗಿದ್ದು, ವಿವಿಧ ಸಮಿತಿಗಳ ಮೂಲಕ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ವಿವಿಧ ಸ್ತರಗಳಲ್ಲಿನ ಜನಗಳಿಗೆ ಅಗತ್ಯಕ್ಕೆ ತಕ್ಕಂತೆ ಸಹಕಾರ ನೀಡುತ್ತಾ ಬಂದಿದೆ. ‘ಇಂದಿನ ವಿದ್ಯಾರ್ಥಿಗಳೇ ಮುಂದಿನ ಸಮುದಾಯದ ಭವಿಷ್ಯದ ರೂವಾರಿ’ ಎಂಬ ನಿತ್ಯ ಸತ್ಯವನ್ನು ಮನಗಂಡು ತಮ್ಮ ಸಂಸ್ಥೆಯು ಕಳೆದ ಎರಡು ದಶಕಗಳಿಂದ ಸಮುದಾಯದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ‘ಬಡ್ಡಿ ರಹಿತ ಸಾಲ’ ರೂಪದಲ್ಲಿ ಕೋಟ್ಯಾಂತರ ರೂಪಾಯಿಗಳ ನೆರವನ್ನು ನೀಡಿದೆ.ಬೆಂಗಳೂರು ಬಂಟರ ಸಂಘದಿಂದ ಸಹಾಯ ಪಡೆದ ಅನೇಕ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಿ ಔದ್ಯೋಗಿಕವಾಗಿ ಮುನ್ನಡೆಯುತ್ತಿರುವುದು ಸಂಘಕ್ಕೆ ಸಾರ್ಥಕತೆಯನ್ನು ತಂದಿದೆ. ಸಂಘವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆರ್ಥಿಕ ಸಹಾಯದ ಸೇವೆಯನ್ನು ಮುಂದುವರಿಸಬೇಕಾದಲ್ಲಿ ಈಗಾಗಲೇ ತಾವು ಸಂಘದಿಂದ ಪಡೆದ ‘ಬಡ್ಡಿ ರಹಿತ ಸಾಲ’ ರೂಪದ ಸಹಾಯ ನಿಧಿಯನ್ನು ಸಂಘಕ್ಕೆ ಹಿಂತಿರುಗಿಸುವುದು ಅತ್ಯಗತ್ಯ. ಸಂಘದ ಸಹಾಯ ಧನ ಹಾಗೂ ತಮ್ಮ ಶ್ರಮದಿಂದ ಔದ್ಯೋಗಿಕವಾಗಿ ಹಾಗೂ ಆರ್ಥಿಕವಾಗಿ ಸಬಲರಾಗಿರುವ ತಾವು, ಪಡೆದ ಹಣವನ್ನು ಸಂಘಕ್ಕೆ ಹಿಂದಿರುಗಿಸುವ ಮೂಲಕ ಇನ್ನಷ್ಟು ಸಮುದಾಯದ ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗುವಂತೆ ಮಾಡಬಹುದು.

ಸಂಘದ ಸಮಾಜಮುಖಿ ಚಿಂತನೆ ಹಾಗೂ ಕಾರ್ಯಚಟುವಟಿಕೆಗಳಿಗೆ ತಾವೆಲ್ಲ ಕೈಜೋಡಿಸುವಿರೆಂಬ ಆಶಯ ನಮ್ಮದು. ನಿಮ್ಮ ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ಹಾಗೂ ಪರಿಚಿತರಲ್ಲಿ ಈ ಬಗ್ಗೆ ಅರಿವು ಮೂಡಿಸುವಂತೆ ವಿನಮೃವಾಗಿ ವಿನಂತಿಸುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಬಹುದಾಗಿದೆ:
ಉಮೇಶ್ ಕುಮಾರ್ ಶೆಟ್ಟಿ- 9741220559, ಸುಧಾಕರ ಶೆಟ್ಟಿ ಹಟ್ಟಿಯಂಗಡಿ – 9449089993, ಸಂಘದ ಕಛೇರಿ : 7022119739, 080-23399323/23399636