ಮತಾಂಧರಿಂದ ಹತ್ಯೆಗೊಳಗಾದ ಹಿಂದೂ ಸಂಘಟನೆ ಕಾರ್ಯಕರ್ತ ದಿ ಸುಹಾಸ್ ಶೆಟ್ಟಿ ಮನೆಗೆ ಕಾರ್ಕಳ ಬಂಟರ ಸಂಘದ ಪ್ರಮುಖರು ಭೇಟಿ ನೀಡಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಕಳ ಹೆಬ್ರಿ ವಲಯದ ಸಂಚಾಲಕರಾದ ವಿಜಯ್ ಶೆಟ್ಟಿಯವರು ತಮ್ಮ ವೈಯುಕ್ತಿಕ 1 ಲಕ್ಷ ರೂಪಾಯಿ ಸಹಾಯಧನವನ್ನು ಸುಹಾಸ್ ಹೆತ್ತವರಿಗೆ ನೀಡಿ ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಸೂರ್ಯಕಾಂತ್ ಶೆಟ್ಟಿ, ಹಿತೇಶ್ ಶೆಟ್ಟಿ, ವಿಖ್ಯಾತ್ ಶೆಟ್ಟಿ, ಸುಹಾಸ್ ಶೆಟ್ಟಿ, ದೇವೇಂದ್ರ ಶೆಟ್ಟಿ, ರಾಕೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.