ಶತಾಯುಷಿ ಪರೀಕ ಚೆನ್ನಿಬೆಟ್ಟು ಸರಸ್ವತಿ ಸೂರಪ್ಪ ಹೆಗ್ಡೆ ಅವರಿಗೆ ಆತ್ರಾಡಿ ಪರೀಕ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನುಡಿನಮನ ಕಾರ್ಯಕ್ರಮ ನಡೆಸಲಾಯಿತು. ಕಲ್ಲಾಡಿ ಶಂಕರ ಟಿ. ಶೆಟ್ಟಿ ಓಂತಿಬೆಟ್ಟು ಅವರು, ಸರಸ್ವತಿಯವರ ಪ್ರೀತಿ, ಮಮತೆ, ಅತಿಥಿ ಸತ್ಕಾರ, ದಾನ, ಧರ್ಮ ಹಾಗೂ ಅವರ ಸದ್ಗುಣಗಳ ಬಗ್ಗೆ ಮಾತನಾಡಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಸರಸ್ವತಿಯವರ ಪುತ್ರ ಸರ್ವೋತ್ತಮ ಶೆಟ್ಟಿ ಅಬುಧಾಬಿ ನುಡಿನಮನ ಸಲ್ಲಿಸಿದರು. ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಅಂಜಾರು ತೆಂಕಬಿಲ್ ಭಾರತಿ ಹೆಗಡೆ ಸ್ವಾಗತಿಸಿದರು.