ಕುಂದಾಪುರದ ಎಸ್.ಎಸ್. ಶೆಟ್ಟಿ ಸಮೂಹ ಸಂಸ್ಥೆಗಳ ಅಂಗ ಸಂಸ್ಥೆಯಾದ ಶ್ರೀ ಸನ್ನಿಧಿ ಟ್ರಾವೆಲ್ಸ್ ಬಸ್ಸುಗಳು ಮಾರ್ಚ್ 2 ರಂದು ಆರಂಭಗೊಂಡಿದೆ. ಉದ್ಯಮಿ ಸತೀಶ್ ಶೆಟ್ಟಿ ಹಾಗೂ ಸನ್ನಿಧಿ ಎಸ್. ಶೆಟ್ಟಿ ಮಾಲಕತ್ವದ ಶ್ರೀ ಸನ್ನಿಧಿ ಟ್ರಾವೆಲ್ಸ್ ನ ಬಸ್ಸುಗಳು ಕುಂದಾಪುರ, ಬೈಂದೂರು, ಕೊಕ್ಕರ್ಣೆ, ಕೊಲ್ಲೂರಿನಿಂದ ಬೆಂಗಳೂರಿಗೆ ಮಾರ್ಚ್ 2 ರಿಂದ ಪ್ರಯಾಣ ಆರಂಭಿಸಿದ್ದು, ವೆಬ್ಸೈಟ್, ರೆಡ್ಬಸ್, ಅಬಿಬಸ್, ಟ್ರಾವೆಲ್ಯಾರಿ, ಪೇಟಿಎಂ, ಫ್ಲಿಪ್ಕಾರ್ಟ್ ಮೂಲಕ ಮುಂಗಡ ಟಿಕೆಟ್ ಕಾದಿರಿಸಬಹುದು. ಸನ್ನಿಧಿ ಟ್ರಾವೆಲ್ಸ್ ಆಪ್ ಮೂಲಕ ಟಿಕೆಟ್ ಮಾಡಿದರೆ ಶೇ.15, ಸನ್ನಿಧಿ ಟ್ರಾವೆಲ್ಸ್ ವೆಬ್ಸೈಟ್ ಮೂಲಕ ಮುಂಗಡ ಟಿಕೆಟ್ ಕಾದಿರಿಸಿದರೆ ಶೇ.10 ರಿಯಾಯಿತಿ ಪಡೆಯಬಹುದು.ವಾರಾಂತ್ಯ, ಹಬ್ಬ ಹರಿ ದಿನಗಳಲ್ಲಿ ಕೂಡಾ ಪ್ರಯಾಣ ದರದಲ್ಲಿ ಏರಿಕೆ ಇರುವುದಿಲ್ಲ. ಬಸ್ಗಳು ಶಿವಮೊಗ್ಗ, ಧರ್ಮಸ್ಥಳ, ಮಂಗಳೂರು ಮಾರ್ಗದಲ್ಲಿ ಸಂಚರಿಸಲಿವೆ. ಸ್ಲೀಪರ್ ಕೋಚ್ ರಾಜ್ಯದಲ್ಲೇ ಪ್ರಥಮ ಬಾರಿಗೆ ಅತ್ಯಧುನಿಕ ಸೌಲಭ್ಯಗಳೊಂದಿಗೆ ವಿಶೇಷವಾಗಿ ವಿನ್ಯಾಸಪಡಿಸಿ ಮೂತ್ರಾಲಯದೊಂದಿಗೆ ಶೌಚಾಲಯವನ್ನೂ ಒಳಗೊಂಡಿರುವುದು ಈ ಬಸ್ಗಳ ವಿಶೇಷವಾಗಿದೆ.
ಪ್ರಯಾಣಿಕರ ಸುರಕ್ಷತೆಗೆ ಗರಿಷ್ಟ ಆದ್ಯತೆ ನೀಡಲಾಗಿದ್ದು, ೨೪ ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ, ಜಿಪಿಎಸ್, ಸಿಸಿ ಕೆಮರಾ ಸಹಿತ ಚೆನ್ನೈಯಲ್ಲಿ ಬಸ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ಅಂತಾರಾಜ್ಯಗಳಿಗೂ ಬಸ್ ಸಂಚರಿಸಲಿದೆ. ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ ನಮ್ಮ ಬಸ್ಸಿನಲ್ಲಿ ದೊರಕಿಸಿಕೊಡುವ ಯೋಚನೆಯಿದೆ. ಬೆಂಗಳೂರಿಗೆ ಹಗಲು ಪ್ರಯಾಣ ಸೇವೆ ಕೂಡಾ ಆರಂಭವಾಗಲಿದೆ ಎಂದು ಸಂಸ್ಥೆಯ ಪಾಲುದಾರ ಸತೀಶ್ ಶೆಟ್ಟಿ ತಿಳಿಸಿದ್ದಾರೆ.
