ಕಾರ್ಕಳ : ಧರ್ಮವನ್ನು ಮೀರಿದ ರಾಷ್ಟ್ರೀಯ ಹಬ್ಬಗಳಲ್ಲಿ ಗಣರಾಜ್ಯೋತ್ಸವವು ಒಂದು. ನಮ್ಮ ಜವಾಬ್ದಾರಿಯನ್ನು ನೆನಪಿಕೊಂಡು ಪ್ರಜಾಪ್ರಭುತ್ವದ ಘನತೆ-ಗೌರವವನ್ನು ಎತ್ತಿಹಿಡಿಯುವತ್ತ ವಿದ್ಯಾರ್ಥಿಗಳು ಚಿತ್ತಹರಿಸಬೇಕು. ಭವ್ಯ ಭಾರತವನ್ನು ಕಟ್ಟುವಲ್ಲಿ ಪ್ರಾಮಾಣಿಕವಾಗಿ ದುಡಿದು ದೇಶ ಸೇವೆಯ ಧನ್ಯತೆಯನ್ನು ಪಡೆಯಬೇಕು ಎಂದು ಸೌತ್ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ನ ಅಧ್ಯಕ್ಷರಾದ ಶ್ರೀ ಪದ್ಮಪ್ರಸಾದ್ ಜೈನ್ ನೆಲ್ಲಿಕಾರು ಹೇಳಿದರು.ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಕ್ರೀಡಾಂಗಣದಲ್ಲಿ ನಡೆದ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಇದೇ ಸಂದರ್ಭ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪ್ರಾಂಶುಪಾಲ ಶ್ರೀ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಶ್ರೀಮತಿ ವಾಣಿ.ಕೆ., ಪಿ.ಆರ್.ಒ ಶ್ರೀಮತಿ ಜ್ಯೋತಿ ಪದ್ಮನಾಭ್ ಭಂಡಿ, ಪತ್ರಕರ್ತ ಶ್ರೀ ರಾಮಚಂದ್ರ ಬರೆಪ್ಪಾಡಿ, ಓಸಿಯನಿಕ್ ಇನ್ಫ್ರಾದ ಮಾಲಿಕ ಶ್ರೀ ಸಂತೋಷ್ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸ ಶ್ರೀ ಸಂತೋಷ್ ನೆಲ್ಲಿಕಾರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Previous Articleಜಿ ಎಮ್ನಲ್ಲಿ 76ನೇ ಗಣರಾಜ್ಯೋತ್ಸವದ ಸಂಭ್ರಮ