ಗ್ಲೋಬಲ್ ಹೆಲ್ತ್ ಕೇರ್ ವೆಲ್ನೆಸ್ ಅವಾರ್ಡ್ಸ್ ಮತ್ತು ಸಮಿಟ್ -2025 ರಲ್ಲಿ ಕೊಡ ಮಾಡುವ ಮೆಡಿಕಲ್ ಎಂಟರ್ಪ್ರಿನರ್ ಆಫ್ ದಿ ಇಯರ್ ಪ್ರಶಸ್ತಿಗೆ ಜನ ವೈದ್ಯದ ಸಂಸ್ಥಾಪಕ ಡಾ. ಅಬಿತ್. ಬಿ. ಶೆಟ್ಟಿ ಆಯ್ಕೆಯಾಗಿದ್ದಾರೆ. ಜನವರಿ 26ರಂದು ಚೆನ್ನೈನ ಸಿಟಿ ಸೆಂಟರ್ ನ ರಾಡಿಸನ್ ಹೋಟೆಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.ಬೆಂಗಳೂರಿನಲ್ಲಿ ಮನೆ ಭೇಟಿ ಮಾಡಿ ಚಿಕಿತ್ಸೆ ನೀಡುವ “ಜನವೈದ್ಯ”ಎಂಬ ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ತನ್ಮೂಲಕ ಕಳೆದ ಮೂರೂವರೆ ವರ್ಷಗಳಲ್ಲಿ 2500ಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸಿದ್ದಾರೆ. 2024ರ ನವೆಂಬರ್ ನಿಂದ ಕಾರ್ಕಳದಲ್ಲೂ ಜನವೈದ್ಯ ಸೇವೆಯನ್ನು ಪ್ರಾರಂಭಿಸಿದ್ದಾರೆ.
ಇವರು ಮೂಲತಃ ಕಾರ್ಕಳ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿಯಾಗಿದ್ದು, ಭಾಸ್ಕರ ಶೆಟ್ಟಿ ಮತ್ತು ಅಮೃತ ಶೆಟ್ಟಿ ದಂಪತಿ ಪುತ್ರ, ಪ್ರಸ್ತುತ ಮುಂಬೈನಲ್ಲಿ ವಾಸವಾಗಿದ್ದು, ಸೇಥ್ ಜಿಎಸ್ ವೈದ್ಯಕೀಯ ಕಾಲೇಜು ಮತ್ತು ಕೆಇಎಂ ಆಸ್ಪತ್ರೆಯಲ್ಲಿ ಎಂಡಿ ಸಮುದಾಯ ವೈದ್ಯಕೀಯದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.