ಸಾಣೂರು ಮುರತ್ತಂಗಡಿ ಶ್ರೀ ಭಕ್ತ ವತ್ಸಲ ಅಯ್ಯಪ್ಪ ಸೇವಾ ಸಮಿತಿಯ ಆಶ್ರಯದಲ್ಲಿ 13ನೇ ವರ್ಷದ ಮಹಾಪೂಜೆಯು ಜನವರಿ 10ರಂದು ಜರುಗಲಿದೆ. ಶಿವಾನಂದ ಶಾಂತಿ ಮೂಡಬಿದಿರೆ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ಬೆಳಿಗ್ಗೆ 7:30ರಿಂದ ಸ್ವಾಮಿಗಳು ಇರುಮುಡಿ ಕಟ್ಟುವುದು, 10 ಗಂಟೆಗೆ ಭಜನಾ ಕಾರ್ಯಕ್ರಮ, 12 ಗಂಟೆಗೆ ಮಹಾಪೂಜೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ಸೌಕೂರು ಕ್ಷೇತ್ರ ಮಹಾತ್ಮೆ : ಸಂಜೆ ಏಳರಿಂದ ತುಳಸಿ ಶೆಟ್ಟಿ ಮತ್ತು ಗಣೇಶ್ ಶೆಟ್ಟಿ ಹಾಗೂ ಮಕ್ಕಳು ಇವರ ಸೇವಾರ್ಥವಾಗಿ ಪಂಚ ಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಸಾರಥ್ಯದ ಸದಾಶಿವ ಅಮೀನ್ ಇವರ ಪ್ರಧಾನ ಭಾಗವತಿಕೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸೌಕೂರು ಇವರು ‘ಭಕ್ತ ವತ್ಸಲ’ ಮನೆಯ ಮುಂಭಾಗದಲ್ಲಿನ ಭವ್ಯ ರಂಗಮಂಟಪದಲ್ಲಿ ಶ್ರೀ ಸೌಕೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ಆಡಿ ತೋರಿಸಲಿದ್ದಾರೆ. ಸಂಜೆ 6.30ಕ್ಕೆ ಚೌಕಿ ಪೂಜೆ ನಂತರ 8ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.ಸಭಾ ಕಾರ್ಯಕ್ರಮದಲ್ಲಿ ಸಾಣೂರು ದೇಂದಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀರಾಮ್ ಭಟ್, ಪಂಚ ಯಕ್ಷಗಾನ ಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಇದರ ಸಂಸ್ಥಾಪಕ ಸತೀಶ್ ಶೆಟ್ಟಿ ಪಟ್ಲ, ನಾಟಕ ರಂಗ ಹಾಗೂ ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೋಡಿಯಲ್ ಬೈಲ್, ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ ಜೈನ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ತಂತ್ರಿಯವರಾದ ಶಿವನಂದ ಶಾಂತಿ, ನಿವೃತ್ತ ಪ್ರಾಂಶುಪಾಲ ಕೆ.ಆರ್ ಸುರೇಶ್, ಆಳ್ವಾಸ್ ಕಾಲೇಜು ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ರಂಗಭೂಮಿ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು, ಸೌಕೂರು ಮೇಳದ ಪ್ರಧಾನ ಭಾಗವತ ಸದಾಶಿವ ಅಮೀನ್, ರಾಮಕೃಷ್ಣ ಗುರುಸ್ವಾಮಿ ನಾಂದೇಡ್ ಲಾತೂರ್ ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಕೆ.ಆರ್. ಸುರೇಶ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೈವ ನರ್ತಕ ನಾರಾಯಣ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ಸ್ಥಾನಿಯಾದ ಪ್ರತೀಕ್ ಜೈನ್ ಇರ್ವತ್ತೂರು, ಹವ್ಯಾಸಿ ಯಕ್ಷಗಾನ ಭಾಗವತ ಜಯಂತ ಸಮಗಾರ, ರಾಮಕೃಷ್ಣ ಗುರುಸ್ವಾಮಿ ನಾಂದೇಡ್ ಲಾತೂಲ್, ಸೌಕೂರು ಮೇಳದ ಪ್ರಧಾನ ಹಾಸ್ಯಗಾರ ಶ್ರೀನಿವಾಸ ಶೆಟ್ಟಿ ಶಂಕರನಾರಾಯಣ ಅವರನ್ನು ಸನ್ಮಾನ ಸನ್ಮಾನಿಸಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.