ಇರಾ, ಮಂಚಿ, ಬೋಳಂತೂರು ಗ್ರಾಮದ ಭಕ್ತರಿಂದ ಆರಾಧಿಸಲ್ಪಡುತ್ತಿರುವ ಅರಸು ಕುರಿಯಾಡ್ದಾರ್ ಮೂವೆರ್ ದೈವಗಳಿಗೆ ಇರಾ ಪಾತ್ರಾಡಿಗುತ್ತುವಿನ ಸಾಮಾನಿ ನಾಮಾಂಕಿತ ಗಡಿ ಪ್ರದಾನವು ಇರಾ ಪಾತ್ರಾಡಿಗುತ್ತು ಕುಟುಂಬಿಕರಿಂದ ಆಯ್ಕೆಯಾಗಿರುವ ಪುಷ್ಪರಾಜ ಶೆಟ್ಟಿ ಅವರಿಗೆ ನಡೆಯಲಿದೆ.
ಈ ಸಂಬಂಧ ಇರಾ ಪಾತ್ರಾಡಿಗುತ್ತು ಮನೆಯಲ್ಲಿ ಕುಟುಂಬಿಕರ ಸಮಾಲೋಚನ ಸಭೆಯಲ್ಲಿ ಕುಟುಂಬದ ದೇವತಾ ಕಾರ್ಯಗಳು ಹಾಗೂ ಇನ್ನಿತರ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಲು ಪಾತ್ರಾಡಿಗುತ್ತು ಚಾರಿಟೇಬಲ್ ಟ್ರಸ್ಟ್ ರಚಿಸಲಾಯಿತು.
ಗಡಿ ಪ್ರಧಾನ ಕಾರ್ಯಕ್ರಮ ವಿಧಿವತ್ತಾಗಿ ಜನವರಿ 4 ರಂದು ಸಂಜೆ 5ರಿಂದ ರಾತ್ರಿ 10ರವರೆಗೆ ಶ್ರೀ ದೈವಗಳಿಗೆ ನಡೆಯುವ ಕುರಿಯಾಡಿ ಸಾರದ ಮಂಜಪಿಲ ನೇಮದ ಸಂದರ್ಭದಲ್ಲಿ ನಡೆಯಲಿದೆ. ಜನವರಿ 12 ರಂದು ಗಡಿಪ್ರದಾನ ಕೃತಜ್ಞತಾ ಸಮಾರಂಭವು ಇರಾ ಬಂಟರ ಭವನದಲ್ಲಿ ಜರಗಲಿದೆ. ಬಡಾಜೆಬೀಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳು ಆಶೀರ್ವಚನ ನೀಡಲಿದ್ದಾರೆ. ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಮಂಜುನಾಥ್ ಭಂಡಾರಿ, ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಮುಖ್ಯಸ್ಥ ಡಾ| ಸದಾನಂದ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಟ್ರಸ್ಟ್ ಸದಸ್ಯರು, ಕುಟುಂಬಿಕರು, ಹಿತೈಷಿಗಳು ಭಾಗವಹಿಸಿದ ಈ ಸಭೆಯಲ್ಲಿ ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.