ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರಿಂದ ಪುಣೆ ಕಂಟೋನ್ಮೆಂಟ್ ಪರಿಸರದಲ್ಲಿ ರಾಷ್ಟ್ರೀಯ ಶಾಲಾ ಆರೋಗ್ಯ ತಪಾಸಣಾ ಶಿಬಿರ ಆಗಸ್ಟ್ 1ರಂದು ಆರಂಭಗೊಂಡಿತು. ಈ ಶಿಬಿರವು ಪುಣೆ ಕಂಟೋನ್ಮೆಂಟ್ ಪರಿಸರದ ಎಲ್ಲಾ ಶಾಲೆಗಳಲ್ಲಿ ನಡೆಯಲಿದೆ. ಡಾ.ಉಷಾ ತಪಾಸೆ (ಪುಣೆ ಕಂಟೋನ್ಮೆಂಟ್ ಹಾಸ್ಪಿಟಲ್ ನ ಆರ್ ಎಂ ಓ), ಡಾ.ಸುಧಾಕರ್ ಶೆಟ್ಟಿ (ಮಕ್ಕಳ ತಜ್ಞರು, ಪುಣೆ ಕಂಟೋನ್ಮೆಂಟ್ ಹಾಸ್ಪಿಟಲ್), ಡಾ. ಭುಜಬಲ್ (ಎಎಂಓ) ಮತ್ತು ಮಟ್ರೋನ್ ಮೊದಲಾದ ಗಣ್ಯರು ಜುಲೈ 31ರಂದು ನಡೆದ ರಾಷ್ಟ್ರೀಯ ಶಾಲಾ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಪಸ್ಥಿತರಿದ್ದರು.
ಆಗಸ್ಟ್ 1 ರಂದು ಬೆಳಿಗ್ಗೆ 8 ಗಂಟೆಗೆ ಪುಣೆಯ ಗಣೇಶ್ ಪೇಟೆಯ ಗುರುನಾನಕ್ ಪ್ರೈಮರಿ ಸ್ಕೂಲ್ ನಲ್ಲಿ ಮತ್ತು ಬೆಳ್ಳಿಗೆ 9.30ಕ್ಕೆ ರಬಿಂದ್ರನಾಥ್ ಪ್ರೈಮರಿ ಸ್ಕೂಲ್ ಕ್ಯಾಂಪ್ ಪುಣೆಯಲ್ಲಿ ರಾಷ್ಟ್ರೀಯ ಶಾಲಾ ಆರೋಗ್ಯ ತಪಾಸಣಾ ಶಿಬಿರವನ್ನು ಡಾ. ಸುಧಾಕರ್ ಶೆಟ್ಟಿಯವರು ಯಶಸ್ವಿಯಾಗಿ ನಡೆಸಿಕೊಟ್ಟರು.