ಶ್ರೀ ಧರ್ಮರಸು ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನ, ಬ್ರಹ್ಮ ಬೈದರ್ಕಳ ಗರಡಿ ನಡ್ಯೋಡಿ ಬೆಟ್ಟ ಗರಡಿ ಸಾಣೂರು ಇದರ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಪ್ರಯುಕ್ತ ಧಾರ್ಮಿಕ ಸಭೆ ಐವೆರ್ ಸತ್ಯೋ ಧರ್ಮ ಚಾವಡಿಯಲ್ಲಿ ನಡೆಯಿತು. ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಒಡಿಯೂರುವಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ ಜೇವನದ ದೀಪ ಬೆಳಗಬೇಕಾದರೆ ಧರ್ಮ ಸಾನ್ನಿಧ್ಯಗಳು ಸುಸ್ಥಿತಿಯಲ್ಲಿರಬೇಕು ಎಂದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶೀಯ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣರು ಉದ್ಘಾಟನೆ ನೆರವೇರಿಸಿ ಧಾರ್ಮಿಕ ಉಪನ್ಯಾಸ ನೀಡಿದರು. ಮಣಿಪಾಲ ವೈಷ್ಣವಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಜ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಶ್ರೀ ಬ್ರಹ್ಮಶ್ರೀ ಮುರಳೀಧರ ತಂತ್ರಿಗಳು ತೆಂಕ ಎಡಪದವು, ವೇ. ಮೂ. ಶ್ರೀರಾಮ್ ಭಟ್, ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಮುಂಬಯಿ ಉದ್ಯಮಿ ಬಿ. ವಿವೇಕ್ ಶೆಟ್ಟಿ ಬೊಳ್ಯ ಗುತ್ತು, ರಮೇಶ್ ಟಿ. ಶೆಟ್ಟಿ ಮುದೆಲಾಡಿ ಮನೆ ಸಾಣೂರು, ಸುರೇಂದ್ರ ಆಚಾರ್ಯ, ಕರುಣಾಕರ ಎಸ್. ಕೋಟ್ಯಾನ್, ಅನುವಂಶೀಯ ಆಡಳಿತ ಮೊಕ್ತೇಸರರು ಮತ್ತು ಅಧ್ಯಕ್ಷರು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಭಾತ್ ನ್ಯಾಕ್ ಸಾಣೂರು ಗುತ್ತು, ರಘುರಾಮ ಧರ್ಮಡ್ಕ ಸಾಣೂರು, ಗೋವಾ ಉದ್ಯಮಿ ಗಣೇಶ್ ಶೆಟ್ಟಿ ಭಕ್ತವತ್ಸಲಾ ಮುರತ್ತಂಗಡಿ ಸಾಣೂರು, ಎಂ. ದಯಾನಂದ ಶೆಟ್ಟಿ, ಡಾ. ಆನಂದ ಬಂಗೇರ, ಡಿ, ಪಿ. ಸಾಲಿಯಾನ್ ಪೆರಂಗೋಡಿಗುತ್ತು ಸಾಣೂರು, ಜಯ ಶೆಟ್ಟಿ ಕಟ್ಟಣಿಗೆ ಗುತ್ತು, ರೋಹಿತ್ ಎರ್ಮಾಳು ಉಪಸ್ಥಿತರಿದ್ದರು.
ಶ್ರೀರಾಮ್ ಭಟ್ ಸಾಣೂರು ಸ್ವಾಗತಿಸಿದರು. ಸುಧೀರ್ ನಾಯಕ್ ಸಚ್ಚರಿಪೇಟೆ ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ ಕೋಟ್ಯಾನ್ ವಂದಿಸಿದರು.