ತುಳುನಾಡಿನ ಮಹಾದಾನಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರ ಮಾತೃಶ್ರೀ ಕನ್ಯಾನ ಲೀಲಾವತಿ ಶೆಟ್ಟಿ (90) ಅವರು ಮಾರ್ಚ್ 28 ರಂದು ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಕನ್ಯಾನ ದಿವಂಗತ ಪಕೀರ ಶೆಟ್ಟಿಯವರ ಪತ್ನಿಯಾಗಿರುವ ಇವರು ಮಕ್ಕಳಾದ ಸದಾಶಿವ ಶೆಟ್ಟಿ, ಚಂದ್ರಹಾಸ ಶೆಟ್ಟಿ, ರಘುರಾಮ ಶೆಟ್ಟಿ, ರವೀಂದ್ರ ಶೆಟ್ಟಿ, ವಿಜಯಲಕ್ಷ್ಮಿ ಶೆಟ್ಟಿ, ದಿವಾಕರ ಶೆಟ್ಟಿ, ನಿತ್ಯಾನಂದ ಶೆಟ್ಟಿ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ. ಸದಾಶಿವ ಶೆಟ್ಟಿಯವರ ಕೊಡುಗೈ ದಾನದಂತಹ ಸಾಮಾಜಿಕ ಕಾರ್ಯಗಳಿಗೆ ಸದಾ ಸ್ಫೂರ್ತಿಯಾಗಿದ್ದ ಇವರು ಊರಿನಲ್ಲಿ ನಡೆಯುವ ಮಹತ್ಕಾರ್ಯಗಳಲ್ಲಿ ಮಕ್ಕಳೊಡನೆ ಪಾಲ್ಗೊಳ್ಳುತ್ತಿದ್ದರು.
ಲೀಲಾವತಿ ಶೆಟ್ಟಿ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತು ಪದಾಧಿಕಾರಿಗಳು, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮತ್ತು ಪದಾಧಿಕಾರಿಗಳು, ಬಾಂಬೇ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ಮತ್ತು ಪದಾಧಿಕಾರಿಗಳು, ತುಳುಕೂಟ ಫೌಂಡೇಶನ್ ನಾಲಾಸೋಪಾರ ಅಧ್ಯಕ್ಷ ಶಶಿಧರ್ ಕೆ ಶೆಟ್ಟಿ ಇನ್ನಂಜೆ ಮತ್ತು ಪದಾಧಿಕಾರಿಗಳು, ಮಾತೃಭೂಮಿ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾದ ಮೋಹನ್ ದಾಸ್ ಶೆಟ್ಟಿ ಉಳ್ತೂರು, ಮತ್ತಿತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.