ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಕೇಂದ್ರ ಮಹಿಳಾ ಘಟಕ ಇದರ ಸಪ್ತಮ ವಾರ್ಷಿಕೋತ್ಸವ ಹಳೆಯಂಗಡಿ ಸಮೀಪದ ಶ್ರೀ ಪಾವಂಜೆ ಕ್ಷೇತ್ರದಲ್ಲಿ ನಡೆಯಿತು. ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ನಾರಾಯಣ ಪಾಟಾಳಿ, ಕಲಾ ಪೋಷಕರಾದ ಶಕುಂತಳಾ ರಮಾನಂದ ಭಟ್, ಸಂಧ್ಯಾ ಜಯದೇವ ಐತಾಳ್, ಪಟ್ಲ ಫೌಂಡೇಶನ್ ನ ಟ್ರಸ್ಟಿ ಸಹನಾ ರಾಜೇಶ್ ರೈ, ಜೆಸಿಐ ಸುರತ್ಕಲ್ ಘಟಕದ ಅಧ್ಯಕ್ಷೆ ಜ್ಯೋತಿ ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶ್ರೀಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಹಳುವಳ್ಳಿ ಇದರ ನಿರ್ದೇಶಕಿ ಜ್ಯೋತಿ ಟಿ ಎನ್ ಕಳಸ, ಧೀಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇದರ ನಿರ್ದೇಶಕಿ ಪದ್ಮಾ ಕೆ ಆರ್ ಆಚಾರ್ಯ ಪುತ್ತೂರು, ಯಕ್ಷಗಾನ ತಾಳಮದ್ದಲೆ ಕಲಾವಿದೆ ರೇವತಿ ನವೀನ್ ಕುಳಾಯಿ ಇವರನ್ನು ಸನ್ಮಾನಿಸಲಾಯಿತು. ಪಟ್ಲ ಪೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ಸುದೇಶ್ ಕುಮಾರ್ ರೈ ಉಪಸ್ಥಿತರಿದ್ದರು. ಮಹಿಳಾ ಕೇಂದ್ರೀಯ ಘಟಕದ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ ಸ್ವಾಗತಿಸಿದರು. ಗೌರವಾಧ್ಯಕ್ಷೆ ಆರತಿ ಆಳ್ವ ವಂದಿಸಿದರು. ಸಾಯಿಸುಮ ನಾವಡ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಪಾವಂಜೆ ಮೇಳದಿಂದ ಧರ್ಮಸಿಂಹಾಸನ ಯಕ್ಷಗಾನ ಪ್ರದರ್ಶನಗೊಂಡಿತು.