ಮೂಡುಬಿದಿರೆ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪೂರ್ವಭಾವಿಯಾಗಿ ಆಳ್ವಾಸ್ ಸ್ನಾತಕೋತ್ತರ ಆಹಾರ ವಿಜ್ಞಾನ ಹಾಗೂ ಪೋಷಕಾಂಶ ವಿಭಾಗದಿಂದ ಆಳ್ವಾಸ್ ಪದವಿ ಹಾಗೂ ಸ್ನಾತಕೋತ್ತರ ಕಾಲೇಜಿನ ಶಿಕ್ಷಕೇತರ ಮಹಿಳಾ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ಹಾಗೂ ಸಮಾಲೋಚನೆ ನಡೆಸಲಾಯಿತು. ರಕ್ತದೊತ್ತಡ, ಹಿಮೋಗ್ಲೋಬಿನ್, ರಕ್ತ ಪರೀಕ್ಷೆ, ಭೌತಿಕ ದ್ರವ್ಯರಾಶಿ ಸೂಚಿ ತಪಾಸಣೆಯನ್ನು ಮಾಡಿ ಆಹಾರ ಕ್ರಮದ ಕುರಿತು ಮಾರ್ಗದರ್ಶನ ವನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸ್ನಾತಕೋತ್ತರ ಆಹಾರ ವಿಜ್ಞಾನ ಹಾಗೂ ಪೋಷಕಾಂಶ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಪ್ರಭಾತ್, ದೈನಂದಿನ ಜೀವನದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯ ಮಹತ್ವ, ಆರೋಗ್ಯದ ಕುರಿತು ಕಾಳಜಿ, ಆಹಾರ ಪದ್ದತಿಯ ಮಹತ್ವದ ಕುರಿತು ತಿಳಿಸಿದರು. ಪ್ರಶ್ನಾವಳಿಯ ಮೂಲಕ ವೈಯಕ್ತಿಕ ಆರೋಗ್ಯ ವಿವರವನ್ನು ಪಡೆಯಲಾಯಿತು. ಮಧ್ಯಮ ವಯಸ್ಕ ಮಹಿಳೆಯರಲ್ಲಾಗುವ ದೈಹಿಕ ಬದಲಾವಣೆ ಹಾಗೂ ಜಂಕ್ ಫುಡ್ ಸೇವನೆಯಿಂದಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವ ಪ್ರಹಸನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ 50 ಜನ ಮಹಿಳಾ ಸಿಬ್ಬಂದಿಗಳು ಪಾಲ್ಗೊಂಡರು. ಉಪನ್ಯಾಸಕಿರಾದ ಅಶ್ವಿನಿ, ಕಾರ್ತಿಕಾದೇವಿ, ಯಶಸ್ವಿ ಇದ್ದರು. ವಿದ್ಯಾರ್ಥಿನಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.