ಭಾರತವು ಕೃಷಿ ಪ್ರಧಾನವಾದ ದೇಶವಾಗಿದ್ದು ಇಂದಿನ ಯುವ ಜನತೆ ಕೃಷಿಯತ್ತ ಒಲವು ತೋರಿಸುವ ಅಗತ್ಯವಿದೆ ಎಂದು ನಿವೃತ್ತ ಸುರತ್ಕಲ್ ಕೃಷಿ ಅಧಿಕಾರ ಅಬ್ದುಲ್ ಬಶೀರ್ ನುಡಿದರು.
ಅವರು ಬಂಟರ ಸಂಘ ಸುರತ್ಕಲ್ ಲಯನ್ಸ್ ಕ್ಲಬ್ ಸುರತ್ಕಲ್ ಮತ್ತು ಜೇಸಿಐ ಸುರತ್ಕಲ್ ಸಹಯೋಗದಲ್ಲಿ ಬಂಟರ ಭವನ ಸುರತ್ಕಲ್ ನಲ್ಲಿ ನಡೆದ ಸಾವಯವ ಕೃಷಿಕರ ಮತ್ತು ಗ್ರಾಹಕರ ಮುಖಾಮುಖಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಈಗೀನ ಕಾಲಘಟ್ಟದಲ್ಲಿ ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಸಾವಯವ ಕೃಷಿಯ ಅಗತ್ಯವಿದೆ. ಗ್ರಾಹಕರು ನೇರವಾಗಿ ಕೃಷಿಕರಿಂದ ಆಹಾರದ ಪದಾರ್ಥಗಳನ್ನು ಖರೀದಿ ಮಾಡಿದಲ್ಲಿ ಕೃಷಿಕರಿಗೆ ಪ್ರಯೋಜನವಾಗಲಿದೆ ಎಂದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಕೃಷಿಕರಾದ ಎಕ್ಕಾರು ಸದಾಶಿವ ಶೆಟ್ಟಿ, ಸುರತ್ಕಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಜಯಂತ ಶೆಟ್ಟಿ ತಡಂಬೈಲ್, ಜೇಸಿಐ ಸುರತ್ಕಲ್ ಅಧ್ಯಕ್ಷೆ ಜ್ಯೋತಿ ಪಿ.ಶೆಟ್ಟಿ, ಬಂಟರ ಸಂಘ ಸುರತ್ಕಲ್ ನಿಕಟಪೂರ್ವ ಅಧ್ಯಕ್ಷ ಸುಧಾಕರ್ ಪೂಂಜಾ, ಕೃಷಿ ಸಮಿತಿ ಸಂಚಾಲಕ ಮೆಬೈಲ್ ಸದಾಶಿವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪುಷ್ಪರಾಜ್ ಶೆಟ್ಟಿ ಮಧ್ಯ ಕಾರ್ಯಕ್ರಮ ನಿರೂಪಿಸಿದರು.