ವಿದ್ಯಾಗಿರಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ 16 ಹಾಗೂ ವಿಷಯವಾರು 97 ಸೇರಿದಂತೆ 115 ರ್ಯಾಂಕ್ ಗಳನ್ನುಪಡೆದಿದ್ದಾರೆ. ಹೋಮಿಯೋಪಥಿಯಲ್ಲಿ ವಿಶ್ವವಿದ್ಯಾಲಯಕ್ಕೆ ಮೀನುಮುರಳಿ ಪ್ರಥಮ ರ್ಯಾಂಕ್ ಪಡೆದರೆ, ಸಾರಾ ಸಹ್ಲಾ ಐದನೇ ರ್ಯಾಂಕ್ ಪಡೆದಿದ್ದಾರೆ. ಆ ಮೂಲಕ ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಸತತ ಎರಡನೇ ವರ್ಷವೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಥಮ ರ್ಯಾಂಕ್ ಜೊತೆಗೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
ಪ್ರಥಮ ವರ್ಷದ ಬಿಎಚ್ಎಂಎಸ್-ಸೆಪ್ಟೆಂಬರ್ 2018 (ಹೋಮಿಯೋಪಥಿ ವೈದ್ಯಕೀಯ ವಿಜ್ಞಾನ ಪದವಿ)ನಲ್ಲಿ ಮೀನು ಮುರಳಿ 5ನೇ ಹಾಗೂ ಅಶ್ನಿ ವಿ. ಸುವರ್ಣ 10ನೇ ರ್ಯಾಂಕ್ ಪಡೆದಿದ್ದಾರೆ. ದ್ವಿತೀಯ ಬಿಎಚ್ಎಂಎಸ್ (ಸೆಪ್ಟೆಂಬರ್ 2019)ನಲ್ಲಿ ಮೀನುಮುರಳಿ ಪ್ರಥಮ ಹಾಗೂ ಮಹಾಝಕಾರಿಯಾ ಪಣಕ್ಕಲ್ ತೃತೀಯ, ಸಾರಾಸಹ್ಲಾ ಐದನೇ ಹಾಗೂ ಶಿಲ್ಪಾ ಸಿವದಾಸ್ ಮತ್ತು ಗ್ರೀಷ್ಮಾಗಣೇಶ್ ಏಳನೇ, ಸ್ಪೂರ್ತಿ ಮತ್ತು ಅಶ್ನಿ ಸುವರ್ಣ 8ನೇ, ಅನಘಾ
ಎಸ್.ಎಂ. 10ನೇ ರ್ಯಾಂಕ್ ಪಡೆದಿದ್ದಾರೆ.
ತೃತೀಯ ಬಿಎಚ್ಎಂಎಸ್ (ಫೆಬ್ರುವರಿ-2021)ನಲ್ಲಿ ಮೀನುಮುರಳಿ ಪ್ರಥಮ, ಸಾರಾ ಸಹ್ಲಾ ನಾಲ್ಕನೇ, ಸ್ಪೂರ್ತಿ 10ನೇ ರ್ಯಾಂಕ್ ಪಡೆದಿದ್ದಾರೆ. ಅಂತಿಮ ವರ್ಷ (ಜೂನ್-2022)ದಲ್ಲಿ ಮೀನುಮುರಳಿ ಪ್ರಥಮ, ಸಾರಾ ಸಹ್ಲಾ 6ನೇ ಹಾಗೂ ಅನಘಾ ಎಸ್.ಎಂ. 10ನೇರ್ಯಾಂಕ್ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ ಆಳ್ವ ಅಭಿನಂದಿಸಿದ್ದಾರೆ.