ಮುಲ್ಕಿ ಸೀಮೆಯ ಕರ್ನಿರೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ವಿಷ್ಣುಮೂರ್ತಿ ದೇವರ ಬ್ರಹ್ಮಕಲಶೋತ್ಸವವು ಜನವರಿ ತಿಂಗಳ 17 ನೇ ತಾರೀಕಿನಿಂದ 23 ರವರೆಗೆ ನಡೆಯಲಿದೆ. ಆ ಪ್ರಯುಕ್ತ ಮುಂಬಯಿಯಲ್ಲಿ ನೆಲೆಸಿರುವ ಗ್ರಾಮದ ಭಕ್ತರನ್ನು, ಹಿತೈಷಿಗಳನ್ನು ವೈಯಕ್ತಿಕವಾಗಿ ಸಂಪರ್ಕಿಸಲು ಸಮಯಾವಕಾಶ ಸಿಗದ ಕಾರಣ, ವೈಯಕ್ತಿಕವಾಗಿ ಆಮಂತ್ರಿಸಲು ಹಾಗೂ ಕ್ಷೇತ್ರದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಸಂಪೂರ್ಣ ಮಾಹಿತಿಯನ್ನು ನೀಡಲು ಸಮಾಲೋಚನೆ ಸಭೆಯನ್ನು ಜನವರಿ 3 ರಂದು ಬುಧವಾರ ಮುಂಬಯಿ ಗೋರೆಗಾವ್ ಪೂರ್ವದ ಸಿಟಿ ಫಿಲಂ ರಸ್ತೆಯ ಒಬೆರಾಯ್ ಮಾಲ್ ಬಳಿಯ ಹೋಟೆಲ್ ‘ಬಾಂಬೆ 63’ ಇಲ್ಲಿ ಸಂಜೆ 4 ಗಂಟೆಗೆ ಸಭೆಯನ್ನು ಕರೆಯಲಾಗಿದೆ.
ಈ ಸಭೆಯಲ್ಲಿ ಊರಿನ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿರುತ್ತಾರೆ. ಶ್ರೀ ವಿಷ್ಣುಮೂರ್ತಿ ದೇವರ ಭಕ್ತಾಭಿಮಾನಿಗಳು ಈ ಸಭೆಗೆ ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಗೌರವಾಧ್ಯಕ್ಷ ರವೀಂದ್ರ ಸಾಧು ಶೆಟ್ಟಿ ಹೊಸಮನೆ, ಕಾರ್ಯಧ್ಯಕ್ಷ ಹರಿಶ್ಚಂದ್ರ ಶೆಟ್ಟಿ ಕರ್ನಿರೆ ಗುತ್ತು, ಉಪಾಧ್ಯಕ್ಷ ಗಂಗಾಧರ ಎನ್ ಅಮೀನ್ ಕರ್ನಿರೆ ಹಾಗೂ ಮತ್ತಿತರ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.