ಸ್ವಯಂ ಅರಿವು, ಸ್ವಯಂ ನಿಯಂತ್ರಣ ಮತ್ತು ಸ್ವಯಂ ಪ್ರತಿಭೆಗಳಿಂದ ಕೂಡಿದ ನಡವಳಿಕೆಗಳು ಸಮಾನಾಂತರವಾಗಿ ಕ್ರೀಯಾಶೀಲವಾಗಿ ಮುನ್ನಡೆದರೆ ಯಾವುದೇ ಗುಂಪು, ಸಂಘ ಅಥವಾ ಸಂಘಟನೆಗಳು ಬಲಗೊಳ್ಳುತ್ತವೆ. ನಮ್ಮ ನಡವಳಿಕೆಗಳು ದನಾತ್ಮಕ ಚಿಂತನೆಯೊಂದಿಗೆ ಸಮಾಜ ಮುಖಿಯಾಗಿರಬೇಕು. ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎಂದೆನಿಸಿಕೊಳ್ಳುತ್ತದೆ. ಪ್ರತಿಯೊಬ್ಬರಲ್ಲೂ ತಮ್ಮ ಯೋಗ್ಯತಾನುಸಾರ ಯಾವುದೇ ವಿಧದಲ್ಲಿಯಾದರೂ ಸೇವೆ ಮಾಡುವ ಮನೋಭಾವ ಹೊಂದಿದ್ದರೆ ಸಂಘಟನೆ ಮೂಲಕ ಯಾವುದೇ ಘನ ಕಾರ್ಯ ಮಾಡಬಹುದು. ಇದೇ ಧ್ಯೇಯ ಉದ್ದೇಶ ಸಂಘಟನೆಯ ಪ್ರತಿಯೊಬ್ಬರಲ್ಲೂ ಇದ್ದರೆ ಸಮಾಜಕ್ಕೆ ನಮ್ಮಿಂದ ಏನಾದರೂ ಅರ್ಪಣೆ ಮಾಡಲು ಸಾದ್ಯ. ಮಾನವ ಒಗ್ಗಟ್ಟೇ ಸಂಘಟನೆಯ ಬಲ. ಇದು ಮತ್ತಷ್ಟು ಬೆಳೆಯಬೇಕು. ನಮ್ಮ ತುಳುಕೂಟದ ಉದ್ದೇಶವೇ ಇದೇ ಆಗಿದೆ. ಜನ ಬಲವರ್ಧನೆ ಮಾಡುವ ಮೂಲಕ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು. ಇಂದು ನಮ್ಮ ವಿಹಾರ ಕೂಟದಲ್ಲಿ ದೊಡ್ಡ ಮಟ್ಟದಲ್ಲಿ ಸೇರಿದ ತಮ್ಮೆಲ್ಲರ ಸಹಕಾರ ಪ್ರೋತ್ಸಾಹ ಇದೇ ರೀತಿ ಮುಂದುವರಿಯಲಿ. ಈ ವಿಹಾರ ಕೂಟ ಇಷ್ಟು ದೊಡ್ಡ ಮಟ್ಟದ ತುಳುವರ ಕೂಡುವಿಕೆಯಲ್ಲಿ ಅತ್ಯಂತ ಯಶಸ್ವಿಯಾಗಲು ಕಾರಣಕರ್ತರಾದ ಪ್ರಾಯೋಜಕರುಗಳಿಗೆ, ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಸಹಕಾರ ನೀಡಿದ ಎಲ್ಲರಿಗೂ ದನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಪುಣೆ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ನುಡಿದರು.
ಪುಣೆ ತುಳುಕೂಟದ ವತಿಯಿಂದ ತುಳು ಕನ್ನಡಿಗರಿಗಾಗಿ ವಿಹಾರ ಕೂಟವನ್ನು ಡಿ 24ರಂದು ಪುಣೆಯ ಹತ್ತಿರದ ರಾಜ್ ಗಡ್ ಅಡ್ವೆಂಚರ್ ವಾಟರ್ ಪಾರ್ಕ್ ಇಲ್ಲಿಗೆ ಆಯೋಜಿಸಲಾಗಿತ್ತು. ಪುಣೆ ತುಳು ಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರುರವರ ಮುಂದಾಳತ್ವದಲ್ಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರೀಯಾ ದೇವಾಡಿಗ ಮತ್ತು ತುಳುಕೂಟದ ಸಮಿತಿ ಮತ್ತು ಮಹಿಳಾ ವಿಬಾಗದ ಮೇಲ್ವಿಚಾರಣೆಯಲ್ಲಿ ನಡೆದ ಈ ವಿಹಾರ ಕೂಟದಲ್ಲಿ ಪುಣೆಯ ತುಳು ಕನ್ನಡಿಗರ ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ ಸುಮಾರು 650ಕ್ಕಿಂತಲೂ ಮಿಕ್ಕಿದ ಬಾಂಧವರು ಪಾಲ್ಗೊಂಡಿದ್ದರು. ಸುಮಾರು 8 ಬಸ್ಸುಗಳು ಮತ್ತು ಇತರೆ ವಾಹನ ವ್ಯವಸ್ಥೆಯನ್ನು ತುಳುಕೂಟದ ವತಿಯಿಂದ ಮಾಡಲಾಗಿತ್ತು. ಮೊದಲಿಗೆ ಪಾರ್ಕ್ ನಲ್ಲಿ ಸೇರಿದ ಎಲ್ಲರೂ ರಾಷ್ಟ್ರಗೀತೆಯನ್ನು ಹಾಡಿ ವಿಹಾರಕೂಟವನ್ನು ಆರಂಭಿಸಲಾಯಿತು. ಉಪಾಹಾರ, ಊಟ, ತಿಂಡಿ ಚಾ ವ್ಯವಸ್ಥೆಯನ್ನು ಪ್ರಾಯೋಜಕರುಗಳ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು.
ಈ ಸಂದರ್ಭದಲ್ಲಿ ತುಳುಕೂಟ ಅಧ್ಯಕ್ಷರಾದ ದಿನೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಲಘು ಸಭಾ ಕಾರ್ಯಕ್ರಮವನ್ನು ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದು ವೇದಿಕೆಯಲ್ಲಿ ತುಳುಕೂಟದ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆ ಹೊಳೆ, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಉಪಾಧ್ಯಕ್ಷರುಗಳಾದ ಮಾಧವ ಶೆಟ್ಟಿ, ಉದಯ್ ಶೆಟ್ಟಿ ಕಳತ್ತೂರು, ಶೇಖರ್ ಪೂಜಾರಿ, ಪ್ರ ಕಾರ್ಯದರ್ಶಿ ರಾಜರಾಮ್ ಶೆಟ್ಟಿ, ಮಹಿಳಾ ಅಧ್ಯಕ್ಷೆ ಪ್ರೀಯ ಎಚ್ ದೇವಾಡಿಗ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘ ಕಾತ್ರಜ್ ಅಧ್ಯಕ್ಷ ಸುಭಾಷ್ ಶೆಟ್ಟಿ, ಬಂಟರ ಸಂಘ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ, ತುಳುಕೂಟದ ಯುವ ವಿಬಾಗ ಮಹಿಳಾ ಕಾರ್ಯಾಧ್ಯಕ್ಷೆ ಶ್ರುತಿ ಜೆ ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಹಾರ ಕೂಟಕ್ಕೆ ವಿವಿಧ ರೀತಿಯಲ್ಲಿ ಪ್ರಾಯೋಜಕತ್ವ ವಹಿಸಿದ ಮಹನೀಯರನ್ನು ಮತ್ತು ಸಹಕರಿಸಿದ ಸದಸ್ಯರಿಗೆ ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು. ಆನ್ ಲೈನ್ ಮೂಲಕ ತುಳು ಲಿಪಿ ಕಲಿಸಿದ ಇನ್ನು ಮುಂದೆ ತುಳುಕೂಟದ ಮುಖಾಂತರ ಕಲಿಕಾ ಕೇಂದ್ರ ಪ್ರಾರಂಭಿಸಲಿರುವ ಸರಸ್ವತಿ ಕುಲಾಲ್ ಇವರನ್ನು ಗೌರವಿಸಲಾಯಿತು. ಪ್ರವೀಣ್ ಶೆಟ್ಟಿ ಪುತ್ತೂರು, ಉದಯ್ ಶೆಟ್ಟಿ ಕಳತ್ತೂರು, ಪ್ರಿಯ ದೇವಾಡಿಗ ಸಾಂದರ್ಭಿಕವಾಗಿ ಮಾತನಾಡಿದರು. ನಂತರ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗಾಗಿ ವಿವಿದ ಪ್ರತಿಭಾ ಸ್ಪರ್ದೆಗಳು, ಮನೋರಂಜನಾ ಕಾರ್ಯಕ್ರಮಗಳು ಜರಗಿದವು.
ಮಕ್ಕಳು, ಮಹಿಳೆಯರು, ಪುರುಷರು ವಾಟರ್ ಪಾರ್ಕ್ ನಲ್ಲಿ ಮಿಂದು, ನಲಿದು ಸಂತೋಷ ಪಟ್ಟರು. ವಿವಿದ ಸಮಿತಿಯ ಮುಖ್ಯಸ್ಥರುಗಳು, ಪದಾಧಿಕಾರಿಗಳು ವಿಹಾರ ಕೂಟದಲ್ಲಿ ಯಾವುದೇ ರೀತಿಯ ತೊಂದರೆ, ಲೋಪ ಆಗದಂತೆ ವ್ಯವಸ್ಥಿತವಾಗಿ ನಡೆಯುವಂತೆ ಮೇಲ್ವಿಚಾರಣೆ ನೋಡಿಕೊಂಡರು. ದಿನೇಶ್ ಶೆಟ್ಟಿ ಕಳತ್ತೂರು, ಪ್ರವೀಣ್ ಶೆಟ್ಟಿ ಪುತ್ತೂರು, ಮೋಹನ್ ಶೆಟ್ಟಿ ಎಣ್ಣೆಹೊಳೆ, ಮಾಧವ ಶೆಟ್ಟಿ, ಉದಯ್ ಶೆಟ್ಟಿ ಕಳತ್ತೂರು, ಯಶವಂತ್ ಶೆಟ್ಟಿ ಉಲಾಯಿಬೆಟ್ಟು, ಶೇಖರ್ ಪೂಜಾರಿ, ರಾಜಾರಾಮ್ ಶೆಟ್ಟಿ, ನಾರಾಯಣ ಹೆಗ್ಡೆ, ಮಹಾಬಲೇಶ್ವರ ದೇವಾಡಿಗ, ಮನೋಹರ್ ಶೆಟ್ಟಿ, ಆನಂದ್ ಶೆಟ್ಟಿ, ಸದಾನಂದ ಪೂಜಾರಿ, ಸಂತೋಷ್ ಶೆಟ್ಟಿ ಎಣ್ಣೆಹೊಳೆ ಬಾಲಕೃಷ್ಣ ಗೌಡ, ಪ್ರೇಮಾ ಶೆಟ್ಟಿ, ಪ್ರಕಾಶ್ ಪೂಜಾರಿ, ನವೀನ್ ಬಂಟ್ವಾಳ್ ಮತ್ತಿತರರು ಈ ವಿಹಾರ ಕೂಟದ ಪ್ರಾಯೋಜಕತ್ವ ವಹಿಸಿಕೊಂಡು ಸಹಕರಿಸಿದರು. ಪ್ರಿಯ ಎಚ್ ದೇವಾಡಿಗ, ಉದಯ್ ಶೆಟ್ಟಿ ಕಳತ್ತೂರು, ಸಂತೋಷ್ ಶೆಟ್ಟಿ ಎಣ್ಣೆಹೊಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.