ವಿದ್ಯಾಗಿರಿ: ನಿಟ್ಟೆ ಮಹಾಲಿಂಗ ತಾಂತ್ರಿಕ ಮಹಾವಿದ್ಯಾಲಯ (ಪರಿಗಣಿತ) ಆಶ್ರಯದಲ್ಲಿ ನಡೆದ ಆಹ್ವಾನಿತ ತಂಡಗಳ ಅಂತರ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಗವಿಷ್ಟ-23’ರಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಭೀಷ್ಮ ಪ್ರತಿಜ್ಞೆ’ ಪ್ರಸಂಗವು ಸಮಗ್ರ ತಂಡ ಪ್ರಥಮ ಬಹುಮಾನ ಪಡೆಯಿತು. ವೈಯಕ್ತಿಕ ವಿಭಾಗದ ದೇವದ್ರತ ಪಾತ್ರಧಾರಿ ಆಳ್ವಾಸ್ ಕಾಲೇಜಿನ ಶಬರೀಷ ಆಚಾರ್ಯ ಮುನಿಯಾಲು, ಶಂತನು ಪಾತ್ರಧಾರಿ ಶ್ರೀವತ್ಸ ಗಂಗಾಧರ ಹೆಗ್ಡೆ, ದಾಶರಾಜ ಪಾತ್ರಧಾರಿ ಪ್ರಹ್ಲಾದ್ ಭಟ್ ಕಡಂದಲೆ ಪ್ರಥಮ ಸ್ಥಾನಗಳನ್ನು ಪಡೆದಿದ್ದಾರೆ.
ಮಂತ್ರಿ ಸುನೀತ ಪಾತ್ರಧಾರಿ ಸಂಶ್ರಿತ್ ಜೈನ್, ರಕ್ಕಸ ಬಲ ಪಾತ್ರಧಾರಿ ಕೃತಿಕ್ ಶೆಟ್ಟಿ ದ್ವಿತೀಯ ಸ್ಥಾನಗಳನ್ನು ಪಡೆದಿರುತ್ತಾರೆ. ಪ್ರಥಮ ಸ್ಥಾನ ಪಡೆದತಂಡ ಹಾಗೂ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.