ಕತ್ತಲೆಯ ಮೇಲೆ ಬೆಳಕಿನ ವಿಜಯ, ಅಜ್ಞಾನದ ಮೇಲೆ ಜ್ಞಾನದ ವಿಜಯ, ಕೆಟ್ಟದ್ದರ ಮೇಲೆ ಒಳ್ಳೆಯತನದ ವಿಜಯವನ್ನು ಸಂಕೇತಿಸುವ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಪ್ರತಿ ಮನ ಮನೆಗಳಲ್ಲಿ ವಿಜ್ರಂಬಿಸುತಿರಲು, ನಮ್ಮ ತುಳು ಭಾಂದವರ ಮನಸ್ಸುಗಳ ಮನೆ ತುಳುಕೂಟದ ಕಚೇರಿಯಲ್ಲಿ ದೀಪಾವಳಿ ಸಡಗರದಿಂದ ಆಚರಿಸಿ ಮನ ತುಂಬಿದೆ. ಮೈ ಮನಸ್ಸುಗಳನ್ನು ಸ್ವಚ್ಛಗೊಳಿಸುವ ಮತ್ತು ಹೊಸತನ ವೊಂದು ಮೂಡಿ ಬರಲು ಮನ ಮನಸ್ಸುಗಳು ಕೂಡಿ ಮಾಡುವ ಹಬ್ಬದ ಆಚರಣೆಗೆ ಮಹತ್ವವಿದೆ. ಇಂತಹ ದೀಪಾವಳಿ ಹಬ್ಬವನ್ನು ನಮ ಕಚೇರಿಯಲ್ಲಿ ಲಕ್ಷ್ಮಿ ಪೂಜೆ ಮಾಡಿ ದೀಪ ಜ್ಯೋತಿ ಬೆಳಗಿಸಿ ತುಳುನಾಡ ಸಂಪ್ರದಾಯದ ಪ್ರಕಾರ ಬಲಿಯೇಂದ್ರ ಕರೆಯುವ ಮೂಲಕ ನಮ್ಮ ತುಳು ಸಂಸ್ಕ್ರತಿಯ ಅನಾವರಣವೆ ಇಲ್ಲಿ ಆಗಿದೆ ಎಂದರೆ ತಪ್ಪಾಗಲಾಗದು. ಸಾಂಸ್ಕ್ರತಿಕ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಮತ್ತು ಸಮಿತಿ, ಮಹಿಳಾ ವಿಭಾಗದವರ ಕೂಡುವಿಕೆಯಲ್ಲಿ ಸಂಪ್ರದಾಯ ಪ್ರಕಾರ ದೀಪಾವಳಿಯ ಆಚರಣೆಯಲ್ಲಿ ತುಳು ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದೀರಿ, ದೀಪಗಳ ಹಬ್ಬ ದೀಪಾವಳಿಯು ಎಲ್ಲರ ಬಾಳಿನಲ್ಲಿ ಶುಭವನ್ನು ತರಲಿ, ಸರ್ವರಿಗೂ ಸುಖ ಅಯುರಾರೋಗ್ಯ ಸಮೃದ್ದಿ ಕೂಡಿ ಬರಲಿ ಎಂದು ಶುಭ ಹಾರೈಸುತ್ತೇನೆ ಎಂದು ಪುಣೆ ತುಳು ಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ನುಡಿದರು.
ಪುಣೆ ವಾರ್ಜೆಯಲ್ಲಿರುವ ಪುಣೆ ತುಳುಕೂಟದ ಕಚೇರಿಯಲ್ಲಿ ಸರ್ವ ತುಳು ಭಾಂದವರ ಕೂಡುವಿಕೆಯಲ್ಲಿ ದೀಪಾವಳಿ ಆಚರಣೆಯು ನ 13ರಂದು ಜರಗಿತು. ತುಳು ಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ದಂಪತಿಗಳು, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ತುಳುಕೂಟದ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆ ಹೊಳೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ದೇವಾಡಿಗ, ಗೌರವ ಕಾರ್ಯಾಧ್ಯಕ್ಷೆ ಸುಜಾತಾ ಶೆಟ್ಟಿ ಮತ್ತು ಎಲ್ಲಾ ಸಮಿತಿಯ ಸದಸ್ಯರುಗಳ ಕೂಡುವಿಕೆಯಲ್ಲಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಅಧ್ಯಕ್ಷರು ಮತ್ತು ಸುಮಂಗಲೆಯರು ದೀಪ ಜ್ಯೋತಿ ಬೆಳಗಿಸಿ ಲಕ್ಷ್ಮಿ ದೇವಿಗೆ ಆರತಿ ಗೈದರು, ನಂತರ ತುಳುನಾಡ ದೀಪಸ್ತಂಭದಲ್ಲಿ ಎಲ್ಲರೂ ಹಣತೆಯನ್ನು ಹಚ್ಚಿ ದೀಪಬೆಳಗಿದರು. ಹರೀಶ್ ಶೆಟ್ಟಿ ಖಜಾನೆ ಬಲಿ ಚಕ್ರವರ್ತಿಯ ಬಗ್ಗೆ ವಿವರಿಸಿ ತುಳುನಾಡ ಬಲಿಯೇಂದ್ರ ಸಂಪ್ರದಾಯದ ಬಗ್ಗೆ ವಿವರಿಸಿ ಬಲಿಯೇಂದ್ರ ಕರೆದರು, ಸೇರಿದ ಎಲ್ಲರೂ ಸೇರಿ ದ್ವನಿ ಗೂಡಿಸಿದರು. ಯುವಕರ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸೇರಿದ ಎಲ್ಲಾ ತುಳು ಭಾಂದವರು ಪರಸ್ಪರ ಶುಭ ಹಾರೈಸಿದರು. ಸಿಹಿ ತಿಂಡಿ ಹಂಚಲಾಯಿತು. ನಂತರ ಲಘು ಉಪಹಾರ ನಡೆಯಿತು. ಉಪಾಧ್ಯಕ್ಷ ಉದಯ್ ಶೆಟ್ಟಿ ಕಳತ್ತೂರುರವರು ಈ ದೀಪಾವಳಿಯ ಆಚರಣೆಯಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರಾಯೋಜಕತ್ವ ವಹಿಸಿ ಸಹಕರಿಸಿದರು, ಹಾಗೂ ಪದಾಧಿಕಾರಿಗಳು ಸಹಕರಿಸಿದರು. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಮತ್ತು ಮಹಿಳಾ ಕಾರ್ಯಾಧ್ಯಕ್ಷೆ ಪ್ರಿಯಾ ದೇವಾಡಿಗ ದೀಪಾವಳಿಯ ಶುಭ ಹಾರೈಸಿದರು.
ತುಳುಕೂಟದ ಸಮಿತಿಯ ಪ್ರಮುಖರಾದ ಉದಯ ಶೆಟ್ಟಿ ಕಳತ್ತೂರು, ರಾಜಾರಾಮ್ ಶೆಟ್ಟಿ, ಗುರುನಾಥ್ ಶೆಟ್ಟಿ, ದಿವಾಕರ್ ಶೆಟ್ಟಿ ಮಾಣಿಬೆಟ್ಟು, ಮಹಾಬಲೇಶ್ವರ ದೇವಾಡಿಗ, ಸದಾನಂದ ಪೂಜಾರಿ, ಮತ್ತು ಎಲ್ಲಾ ಸಮಿತಿ ಪ್ರಮುಖರು, ಮಹಿಳಾ ವಿಭಾಗದ ಪ್ರಮುಖರಾದ ಶಶಿಕಲಾ ಶೆಟ್ಟಿ, ಗೀತಾ ಪೂಜಾರಿ, ನಯನ ಶೆಟ್ಟಿ , ಶಶಿಕಾಂತಿ ದೇವಾಡಿಗ, ಶ್ರುತಿ ಶೆಟ್ಟಿ ಮತ್ತು ಎಲ್ಲಾ ಸಮಿತಿಯ ಪ್ರಮುಖರು ಸದಸ್ಯರು, ಯುವ ವಿಭಾಗದ ಸದಸ್ಯರುಗಳು ಮತ್ತು ತುಳು ಭಾಂದವರು, ಮಕ್ಕಳು ಉಪಸ್ಥಿತರಿದರು.
ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಎಣ್ಣೆಹೊಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ದೀಪಾವಳಿ ಎಂದರೆ ಸಡಗರ ಸಂಭ್ರಮದ ಹಬ್ಬ , ನಮ್ಮ ತುಳುನಾಡಿನಲ್ಲಿ ದೀಪಾವಳಿಗೆ ವಿಶೇಷ ರೀತಿಯ ಸಂಪ್ರದಾಯವಿದೆ. ಪ್ರತಿ ಮನೆ ಮನೆಯಲ್ಲೂ ದೀಪ ಬೆಳಗಿಸಿ, ಲಕ್ಷ್ಮಿ ಪೂಜೆ, ಗೋ ಪೂಜೆ, ಬಲಿಯೇಂದ್ರ ಕರೆಯುವ ಮೂಲಕ ಆಚರಿಸಲಾಗುತ್ತದೆ. ನಮ್ಮ ಕರ್ಮಭೂಮಿ ಪುಣೆಯಲ್ಲಿ ತುಳು ಕೂಟದ ಮುಖಾಂತರ ನಾವಿಲ್ಲಿ ಒಟ್ಟು ಸೇರಿ ತುಳುನಾಡ ಸಂಪ್ರದಾಯದಂತೆ ಬಹಳ ಸಂಭ್ರಮದಿಂದ ದೀಪಾವಳಿ ಅಚರಿಸಿದ್ದೇವೆ.ಎಲ್ಲರಿಗೂ ದೀಪಾವಳಿಯ ಶುಭಾಶಯಗಳು, ಎಲ್ಲರ ಬಾಳಿನಲ್ಲಿ ಸುಖ ಶಾಂತಿ ಸಮೃದ್ದಿ ಆಯುರಾರೋಗ್ಯ ಪ್ರಾಪ್ತಿಯಾಗಲಿ ಎಂದು ಶುಭ ಹಾರೈಸುತ್ತೇನೆ -ಶ್ರೀ ಪ್ರವೀಣ್ ಶೆಟ್ಟಿ ಪುತ್ತೂರು -ಅಧ್ಯಕ್ಷರು ರಜತ ಮಹೋತ್ಸವ ಸಮಿತಿ ತುಳುಕೂಟ ಪುಣೆ
ನಮ್ಮ ತುಳುಕೂಟದ ವತಿಯಿಂದ ಎಲ್ಲಾ ತುಳು ಭಾಂದವರು ಸೇರಿಕೊಂಡು ಮೊದಲ ಬಾರಿಗೆ ನಮ್ಮ ತುಳುನಾಡ ಪದ್ದತಿಯಂತೆ ದೀಪಾವಳಿಯ ಆಚರಣೆ ಮಾಡುವ ಭಾಗ್ಯನಮಗೆ ಕೂಡಿ ಬಂದಿದೆ. ಎಲ್ಲಾ ಮನಸ್ಸುಗಳು ಒಂದಾಗಿ ಕೂಡಿ ಮಾಡುವ ಹಬ್ಬದ ಆಕರ್ಷಣೆ ತುಂಬಾ ವಿಶಿಷ್ಟ. ಬಹಳ ಸಂತೋಷವಾಗಿದೆ ಇದೆ ರೀತಿಯ ಪ್ರೀತಿ ಸಹಕಾರ ಮುಂದೆಯೂ ನಮ್ಮಲ್ಲಿರಲಿ -ಶ್ರೀಮತಿ ಪ್ರಿಯಾ ದೇವಾಡಿಗ ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ ತುಳುಕೂಟ ಪುಣೆ.
ವರದಿ- ಹರೀಶ್ ಮೂಡಬಿದ್ರಿ ,ಪುಣೆ